×
Ad

ಕಬಡ್ಡಿ ಪಂದ್ಯಾಕೂಟದಲ್ಲಿ ಘರ್ಷಣೆ: ಕತ್ತಿ, ಬಂದೂಕುಗಳಿಂದ ದಾಳಿ

Update: 2023-08-21 19:58 IST

ಲಂಡನ್: ಯುನೈಟೆಡ್‌ ಕಿಂಗ್‌ಡಂನಲ್ಲಿ ರವಿವಾರ ನಡೆದ ಕಬಡ್ಡಿ ಪಂದ್ಯದ ವೇಳೆ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ.

ರವಿವಾರ ಸಂಜೆ ಡರ್ಬಿಶೈರ್‌ನ ಡರ್ಬಿ ಕಬಡ್ಡಿ ಮೈದಾನದಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡ ಮೂವರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯ ಮೇಲೆ ಕತ್ತಿಯಿಂದ ದಾಳಿ ಮಾಡಲಾಗಿದ್ದು, ಅದಕ್ಕೂ ಮುನ್ನ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವೀಡಿಯೊಗಳಲ್ಲಿ, ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಸದಸ್ಯರು ಹಾಕಿ ಸ್ಟಿಕ್‌ಗಳಿಂದ ಪರಸ್ಪರ ಹಲ್ಲೆ ನಡೆಸುವುದು ಕಂಡು ಬಂದಿದೆ.

ಗುಂಡಿನ ಸದ್ದು ಕೇಳಿಸುತ್ತಿದ್ದಂತೆ ಆಟ ವೀಕ್ಷಿಸಲು ಬಂದವರು ಭಯಭೀತರಾಗಿ ಕಬಡ್ಡಿ ಮೈದಾನದಿಂದ ಜಾಗ ಕಾಲಿ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News