ಬಿಜೆಪಿ ಸಂಸದ ಜಾಂಗ್ರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಖಂಡನೆ
Update: 2025-05-25 20:54 IST
PC: x.com/thetribunechd
ಹೊಸದಿಲ್ಲಿ: ಪಹಲ್ಗಾಮ್ ನಲ್ಲಿ ಪ್ರವಾಸಿಗರು ತಮ್ಮ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಎಂಬ ಬಿಜೆಪಿ ಸಂಸದ ರಾಮ್ ಚಂದರ್ ಜಾಂಗ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದೆ.
ಜಾಂಗ್ರೆಯವರನ್ನು ಉಚ್ಚಾಟಿಸಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಅದು ಆಗ್ರಹಿಸಿದೆ.
ಈ ವಿಷಯದಲ್ಲಿ ಪ್ರಧಾನಿ ಹಾಗೂ ಬಿಜೆಪಿ ನಾಯಕತ್ವ ತಾಳಿರುವ ಮೌನವು, ಜಾಂಗ್ರ ಹೇಳಿಕೆಗೆ ನೀಡಿದ ಪರೋಕ್ಷ ಅನುಮೋದನೆಯೆಂದೇ ಪರಿಗಣಿಸಬೇಕು ಎಂದು ಅವರು ಹೇಳಿದರು. ಪಹಲ್ಗಾಮ್ ಸಂತ್ರಸ್ತರನ್ನು ಹಾಗೂ ಸಶಸ್ತ್ರ ಪಡೆಗಳಿಗೆ ಕಳಂಕ ಹಚ್ಚಲು ಬಿಜೆಪಿ ನಾಯಕರು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ ಎಂದರು.