×
Ad

ದೇಶವು ಮೂರು ವರ್ಷಗಳಲ್ಲಿ ನಕ್ಸಲ್ ಪಿಡುಗಿನಿಂದ ಮುಕ್ತವಾಗಲಿದೆ: ಅಮಿತ್ ಶಾ

Update: 2024-01-20 21:22 IST

ಅಮಿತ್ ಶಾ | Photo: PTI

ತೇಜಪುರ (ಅಸ್ಸಾಂ): ಮುಂದಿನ ಮೂರು ವರ್ಷಗಳಲ್ಲಿ ದೇಶವು ನಕ್ಸಲ್ ಪಿಡುಗಿನಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶನಿವಾರ ಪ್ರತಿಪಾದಿಸಿದರು.

ಇಲ್ಲಿಗೆ ಸಮೀಪದ ಸಲೋನಿಬಾರಿಯಲ್ಲಿ ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ಬಲದ 60ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಶಾ, ಎಲ್ಲ ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆ (ಸಿಎಪಿಎಫ್)ಗಳ ಪೈಕಿ ಎಸ್ಎಸ್ಬಿಯು ಗಡಿ ಗ್ರಾಮಗಳ ಸಂಸ್ಕೃತಿ, ಇತಿಹಾಸ, ಭೌಗೋಳಿಕ ಲಕ್ಷಣಗಳು ಮತ್ತು ಭಾಷೆಯನ್ನು ಸೂಕ್ಷ್ಮವಾಗಿ ಸಂಯೋಜಿಸುವಲ್ಲಿ ಮತ್ತು ಈ ಪ್ರದೇಶಗಳಲ್ಲಿಯ ಜನರನ್ನು ದೇಶದ ಉಳಿದ ಭಾಗಕ್ಕೆ ನಿಕಟವಾಗಿಸುವಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.

ಗಡಿಗಳ ರಕ್ಷಣೆಯ ಜೊತೆಗೆ ಎಸ್ಎಸ್ಬಿ ಮತ್ತು ಇತರ ಸಿಎಪಿಎಫ್ಗಳು ಛತ್ತೀಸ್ಗಡ ಮತ್ತು ಜಾರ್ಖಂಡ್ ಗಳಲ್ಲಿ ನಕ್ಸಲರ ವಿರುದ್ಧ ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿವೆ ಎಂದು ಹೇಳಿದ ಶಾ,ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ನಕ್ಸಲ್ ಸಮಸ್ಯೆಯಿಂದ ಶೇ.100ರಷ್ಟು ಮುಕ್ತಗೊಳ್ಳಲಿದೆ ಎಂದರು.

ಅತ್ಯುತ್ಕ್ರಷ್ಟ ಸೇವೆಗಾಗಿ ಆರು ಎಸ್ಎಸ್ಬಿ ಸಿಬ್ಬಂದಿಗಳಿಗೆ ಪ್ರಶಸ್ತಿಗಳನ್ನು ಮತ್ತು ಮೂರು ಬೆಟಾಲಿಯನ್ ಗಳಿಗೆ ಟ್ರೋಫಿಗಳನ್ನು ಪ್ರದಾನಿಸಿದ ಶಾ, ಈ ಸಂದರ್ಭದಲ್ಲಿ ಅಂಚೆಚೀಟಿಯನ್ನೂ ಬಿಡುಗಡೆಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News