×
Ad

ಕ್ಷಿಪ್ರಕ್ರಾಂತಿ ಪ್ರಯತ್ನ: ಬ್ರೆಝಿಲ್ ನ ಮಾಜಿ ಅಧ್ಯಕ್ಷರಿಗೆ ಗೃಹಬಂಧನ

Update: 2025-08-05 18:22 IST

ಜೈರ್ ಬೊಲ್ಸೊನಾರೊ |PC : NDTV 

ಹೊಸದಿಲ್ಲಿ: ಮೂರು ವರ್ಷ ಹಿಂದೆ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಯಿಸ್ ಇನಾಸಿಯೊ ಲೂಲಾ ಡ ಸಿಲ್ವಾ ವಿರುದ್ಧ ಸೋತ ಬಳಿಕ ಬ್ರೆಝಿಲ್ ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಕ್ಷಿಪ್ರಕ್ರಾಂತಿಯ ಸಂಚು ಹೂಡಿದ್ದರು ಎಂಬ ಆರೋಪದಲ್ಲಿ ಮಾಜಿ ಅಧ್ಯಕ್ಷರಿಗೆ ಬ್ರೆಝಿಲ್ ನ ಸುಪ್ರೀಂಕೋರ್ಟ್ ಸೋಮವಾರ ಗೃಹಬಂಧನ ವಿಧಿಸಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಲೆಕ್ಸಾಂಡರ್ ಡೆ ಮೊರಾಸ್ ಈ ತೀರ್ಪು ನೀಡಿದ್ದು, ನ್ಯಾಯಾಲಯ ಈ ಮೊದಲು ವಿಧಿಸಿದ್ದ ಮುಂಜಾಗ್ರತಾ ಕ್ರಮಗಳನ್ನು ಬೊಲ್ಸೊನಾರೊ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ನ್ಯಾಯಾಲಯ ವಿಧಿಸಿ ನಿರ್ಬಂಧಗಳನ್ನು ಉಲ್ಲಂಘಿಸಿ, ಮಾಜಿ ಅಧ್ಯಕ್ಷರು ತಮ್ಮ ಮಗನ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡುತ್ತಿದ್ದರು ಎಂದು ಮೊರಾಸ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಲಪಂಥೀಯ ನಾಯಕ ಅಪರಾಧ ಸಂಘಟನೆಗಳ ನೇತೃತ್ವ ವಹಿಸಿ, ಬಲವಂತವಾಗಿ ಅಧಿಕಾರದಲ್ಲಿ ಕೂರಿಸುವಂತೆ ಸಂಚು ಹೂಡಿದ್ದಾಗಿ ಅಭಿಯೋಜಕರು ವಾದ ಮಂಡಿಸಿದ್ದರು. ಅಧ್ಯಕ್ಷ ಲೂಲಾ ಹತ್ಯೆ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಹತ್ಯೆಯ ಸಂಚು ರೂಪಿಸಿದ್ದ ಆರೋಪದ ಈ ಪ್ರಕರಣ, ಬೊಲ್ಸೊನಾರೊ ಅಧಿಕಾರದಿಂದ ಕೆಳಗಿಳಿದ ಕ್ಷಣದಿಂದ ಎದುರಿಸಿದ ಅತ್ಯಂತ ಗಂಭೀರ ಕಾನೂನಾತ್ಮಕ ಸವಾಲು ಎನಿಸಿಕೊಂಡಿತ್ತು.

ಬೊಲ್ಸೊನಾರೊ ದೇಶದಿಂದ ಪಲಾಯನ ಮಾಡುವ ಎಲ್ಲ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ಮೊರಾಸ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಬ್ರೆಝಿಲ್ ನ ನ್ಯಾಯವ್ಯವಸ್ಥೆಯಲ್ಲಿ ಮಧ್ಯಪ್ರವೇಶಿಸುವಂತೆ ಬೇರೆ ರಾಷ್ಟ್ರದ ನಾಯಕರೊಬ್ಬರಿಗೆ ಬೊಲ್ಸೊನಾರೊ ಮನವಿ ಮಾಡಿಕೊಂಡಿದ್ದಾಗಿಯೂ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಇದು ರಾಷ್ಟ್ರದ ಸಾರ್ವಭೌಮತ್ವದ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News