×
Ad

ಭಾರತದಲ್ಲಿ ತೀವ್ರ ಬಡತನ ಪ್ರಮಾಣ ಗಣನೀಯ ಕುಸಿತ

Update: 2025-06-08 08:00 IST

ಹೊಸದಿಲ್ಲಿ: ವಿಶ್ವಬ್ಯಾಂಕಿನ ಪರಿಷ್ಕೃತ ಅಂತರರಾಷ್ಟ್ರೀಯ ಬಡತನ ರೇಖೆ ವ್ಯಾಖ್ಯೆ ಮತ್ತು ಜೂನ್ ನಲ್ಲಿ ಕಾರ್ಯವಿಧಾನವನ್ನು ಮೇಲ್ದರ್ಜೆಗೇರಿಸಿ ಅಂಕಿ ಅಂಶಗಳನ್ನು ಸೇರಿಸಿರುವ ಬಳಿಕ ಕಳೆದ ಒಂದು ದಶಕದಲ್ಲಿ ಭಾರತದ ತೀವ್ರ ಬಡತನ ದರ ಗಣನೀಯವಾಗಿ ಕುಸಿದಿರುವ ಅಂಶ ಬೆಳಕಿಗೆ ಬಂದಿದೆ.

ವಿಶ್ವಸಂಸ್ಥೆಯ ಪರಿಷ್ಕೃತ ಅಂಕಿ ಅಂಶಗಳ ಪ್ರಕಾರ, ತೀವ್ರ ಬಡತನ ಪ್ರಮಾಣ 2011-12ರಲ್ಲಿ ಇದ್ದ ಶೇಕಡ 27.1ರಿಂದ 2022-23ರಲ್ಲಿ ಶೇಕಡ 5.3ಕ್ಕೆ ಇಳಿದಿದೆ. ತೀವ್ರ ಬಡತನ ಹೊಂದಿದ ಜನರ ಸಂಖ್ಯೆ ಈ ಅವಧಿಯಲ್ಲಿ 344.47 ದಶಲಕ್ಷದಿಂದ 75.24 ಲಕ್ಷಕ್ಕೆ ಇಳಿದಿದೆ. ಅಂದರೆ ಒಂದು ದಶಕದಲ್ಲಿ 270 ದಶಲಕ್ಷ ಮಂದಿಯನ್ನು ತೀವ್ರ ಬಡತನದಿಂದ ಮೇಲೆತ್ತಲಾಗಿದೆ.

ಕಡಿಮೆ ಆದಾಯದ ದೇಶಗಳಿಗೆ ಅಂತರರಾಷ್ಟ್ರೀಯ ಬಡತನ ರೇಖೆಯನ್ನು ಪ್ರತಿ ವ್ಯಕ್ತಿಗೆ ದಿನದ ಆದಾಯವನ್ನು 2.15 ಡಾಲರ್ ಗಳಿಂದ 3 ಡಾಲರ್ ಗೆ ಹೆಚ್ಚಿಸಲಾಗಿದ್ದು, ಮಧ್ಯಮ ಅದಾಯದ ದೇಶಗಳಿಗೆ ಈ ಮಟ್ಟವನ್ನು 3.65 ಡಾಲರ್ ನಿಂದ 4.20 ಡಾಲರ್ ಗೆ ಹಾಗೂ ಮೇಲ್ ಮಧ್ಯಮ ಆದಾಯದ ದೇಶಗಳಿಗೆ ಈ ಪ್ರಮಾಣವನ್ನು 6.85 ಡಾಲರ್ ನಿಂದ 8.40 ಡಾಲರ್ ಗೆ ಹೆಚ್ಚಿಸಲಾಗಿದೆ ಎಂದು ವಿಶ್ವಸಂಸ್ಥೆ ಬ್ಲಾಗ್ ನಲ್ಲಿ ವಿವರಿಸಿದೆ.

2017 ರಿಂದ 2021ರವರೆಗಿನ ಭಾರತದ ಹಣದುಬ್ಬರ ದರದ ಆಧಾರದಲ್ಲಿ ತೀವ್ರ ಬಡತನ ರೇಖೆಯ ಪರಿಷ್ಕೃತ ಮಟ್ಟ ದಿನಕ್ಕೆ 3 ಡಾಲರ್ ಆದಾಯವಾಗಿದೆ. ಇದು ಮೊದಲು ಇದ್ದ 2.15 ಡಾಲರ್ ಗಳಿಗೆ ಹೋಲಿಸಿದರೆ ಶೇಕಡ 15ರಷ್ಟು ಅಧಿಕ, 2022-23ರಲ್ಲಿ ಭಾರತದ ಬಡತನ ಪ್ರಮಾಣ ಶೇಕಡ 5.3ರಷ್ಟಿದೆ. ಕಡಿಮೆ ಮಧ್ಯಮ ಆದಾಯದ ದೇಶಗಳ ಸಾಲಿನಲ್ಲಿ ಭಾರತವನ್ನು ಸೇರಿಸಿದರೆ ಪ್ರತಿ ವ್ಯಕ್ತಿಯ ದಿನದ ಆದಾಯ 4.20 ಡಾಲರ್ ಗಳಿರಬೇಕಿದ್ದು, ಭಾರತದ ಬಡತನ ಪ್ರಮಾಣ 2011-12ರಲ್ಲಿ ಇದ್ದ 57.7 ಶೇಕಡ ಪ್ರಮಾಣದಿಂದ ಶೇಕಡ 223.9ಕ್ಕೆ ಇಳಿದಿದೆ.

ವಿಶ್ವಸಂಸ್ಥೆಯ ಬಡತನ ಮತ್ತು ಅಸಮಾನತೆ ಪ್ಲಾಟ್ ಫಾರಂನಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, 2011-12ರಲ್ಲಿ 732.48 ದಶಲಕ್ಷ ಮಂದಿ ತೀವ್ರ ಬಡತನ ರೇಖೆಗಿಂತ ಕೆಳಗಿದ್ದರೆ, 2022-23ರಲ್ಲಿ ಈ ಪ್ರಮಾಣ 342.32 ದಶಲಕ್ಷಕ್ಕೆ ಇಳಿದಿದೆ. ಉಚಿತ ಮತ್ತು ಸಬ್ಸಿಡಿಯುಕ್ತ ಆಹಾರಧಾನ್ಯ ವಿತರಣೆ ಬಡತನ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಜತೆಗೆ ಗ್ರಾಮೀಣ ಮತ್ತು ನಗರದ ನಡುವಿನ ಅಸಮಾನತೆ ಕುಡಾ ಕಡಿಮೆಯಾಗಿದೆ. ದೇಶದ ಒಟ್ಟು ಬಡವರ ಪೈಕಿ ಐದು ಅತ್ಯಧಿಕ ಜನಸಂಖ್ಯೆಯ ರಾಜ್ಯಗಳ ಪಾಲು ಶೇಕಡ 54ರಷ್ಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News