×
Ad

ಮಾನನಷ್ಟ ಮೊಕದ್ದಮೆ: ಮಾಜಿ ಸಿಎಂ ಪಳನಿಸ್ವಾಮಿ ವಿರುದ್ಧ ಕಾನೂನುಕ್ರಮಕ್ಕೆ ಸುಪ್ರೀಂ ತಡೆಯಾಜ್ಞೆ

Update: 2024-01-19 21:49 IST

 ಕೆ. ಪಳನಿಸ್ವಾಮಿ | Photo: PTI

ಹೊಸದಿಲ್ಲಿ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರ ವಿರುದ್ಧ ಹೂಡಲಾದ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಕಾನೂನುಕ್ರಮಗಳನ್ನು ಕೈಗೊಳ್ಳುವುದಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಮಾಜಿ ಎಡಿಎಂಕೆ ನಾಯಕ ಹಾಗೂ ಲೋಕಸಭಾ ಸದಸ್ಯರಾದ ಕೆ.ಸಿ. ಪಳನಿಸ್ವಾಮಿ ಅವರು ಇಪಿಎಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ತನ್ನ ವಿರುದ್ಧ ದಾಖಲಿಸಲಾದ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ಇಪಿಎಸ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.

ಕೆ.ಸಿ.ಪಳನಿಸ್ವಾಮಿ ಅವರು ಅಕ್ರಮವಾಗಿ ಹಣವನ್ನು ಸ್ವೀಕರಿಸಿದ್ದರು ಹಾಗೂ ಎಡಿಎಂಕೆ ಪಕ್ಷದ ನಕಲಿ ಸದಸ್ಯತ್ವ ಕಾರ್ಡ್ ಗಳನ್ನು ವಿತರಿಸಿದ್ದರು ಎಂದು ಇಪಿಎಸ್ ಆಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ.ಸಿ.ಪಳನಿಸ್ವಾಮಿ ಅವರು ಇಪಿಎಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇಪಿಎಸ್ ಪರವಾಗಿ ವಾದಿಸಿದ ಸುಪ್ರೀಂಕೋರ್ಟ್ ನ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರು ಕೆ.ಸಿ.ಪಳನಿಸ್ವಾಮಿ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿರುವಾಗ ಮಾನನಷ್ಟ ಮೊಕಕದ್ದಮೆಯ ಪ್ರಶ್ನೆ ಎಲ್ಲಿ ಬಂತು ಎಂದು ವಾದಿಸಿದರು.

ಕೆ.ಸಿ.ಪಳನಿಸ್ವಾಮಿ ಅವರ ಪರ ಭಾರತದ ಮಾಜಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ವಾದಿಸಿದ್ದರು. ಉಭಯ ಕಕ್ಷಿಗಳ ವಾದವನ್ನು ಆಲಿಸಿದ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ನ ಆದೇಶಕ್ಕೆ ತಡೆಯಾಜ್ಞೆ ನೀಡಿತು.

ಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ.ಪಿ.ಪನೀರ್ ಸೆಲ್ವಂ ವಿರುದ್ಧ ಎಡಿಎಂಕೆ ಸಂಸದ ಕೆ.ಸಿ.ಪಳನಿಸ್ವಾಮಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ತಿರಸ್ಕರಿಸಿದ ಚೆನ್ನೈನ ಮೆಟ್ರೋಪಾಲಿಟನ್ ನ್ಯಾಯಾಲಯದ ಆದೇಶವನ್ನು ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು ತಳ್ಳಿಹಾಕಿದ್ದರು. ಇದನ್ನು ಪ್ರಶ್ನಿಸಿ, ಇ.ಪನ್ನೀರ್ಸೆಲ್ವನ್ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.

ಇಂದು ಪ್ರಕರರಣದ ಆಲಿಕೆ ನಡೆಸಿದ ಉಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ ಗೆ ಪಟ್ಟಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News