×
Ad

ದಿಲ್ಲಿ ಕಾರು ಸ್ಫೋಟ ಪ್ರಕರಣ | ಬಂಧನ ವದಂತಿ ನಿರಾಕರಿಸಿದ ಉತ್ತರ ಪ್ರದೇಶದ ವೈದ್ಯ

Update: 2025-11-12 20:54 IST

Photo Credit : PTI 

ಸಹಾರನಪುರ(ಉ.ಪ್ರ.), ನ. 12: ತನ್ನನ್ನು ಬಂಧಿಸಲಾಗಿದೆ ಎಂಬ ವದಂತಿಗಳನ್ನು ಸಹಾರನಪುರದ ಫೇಮಸ್ ಮೆಡಿಕೇರ್ ಹಾಸ್ಪಿಟಲ್ ನ ವೈದ್ಯರಾಗಿರುವ ಡಾ. ಬಾಬರ್ ಬುಧವಾರ ನಿರಾಕರಿಸಿದ್ದಾರೆ.

ಸಹೋದ್ಯೋಗಿ ಡಾ. ಆದಿಲ್ ಅಹ್ಮದ್ ಬಂಧನದ ಬಳಿಕ ಡಾ. ಬಾಬರ್ ಅವರ ಬಂಧನದ ವದಂತಿ ಹರಡಿದ್ದವು. ಡಾ. ಆದಿಲ್ ಅಹ್ಮದ್ ಅವರು ಜೈಶೆ ಮುಹಮ್ಮದ್ ನೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಬಂಧಿತರಾಗಿದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಡಾ. ಬಾಬರ್, ತಾನು ಆಸ್ಪತ್ರೆಯಲ್ಲೇ ಇದ್ದೇನೆ. ಯಾರೊಬ್ಬರಿಗೂ ಭೇಟಿಯಾಗಲು ಲಭ್ಯವಿದ್ದೇನೆ ಎಂದಿದ್ದಾರೆ.

‘‘ನಾನು ತನಿಖಾ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಆದರೆ, ಜನರು ವದಂತಿ ಹರಡಬಾರದು’’ ಎಂದು ಅವರು ತಿಳಿಸಿದ್ದಾರೆ.

ತಾನು ಕಳೆದ ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ, ಡಾ. ಆದಿಲ್ ಮಾರ್ಚ್ನಲ್ಲಿ ಇಲ್ಲಿ ಸೇರಿದ್ದರು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

‘‘ಅವರು ಆಸ್ಪತ್ರೆಗೆ ಕೆಲಸಕ್ಕೆ ಸೇರಿದ ಬಳಿಕವೇ ನಾನು ಅವರನ್ನು ಭೇಟಿಯಾದೆ. ಅದಕ್ಕಿಂತ ಮೊದಲು ನನಗೆ ಅವರ ಪರಿಚಯ ಇರಲಿಲ್ಲ. ಅವರ ನಡವಳಿಕೆ ಸಭ್ಯ ಹಾಗೂ ವೃತ್ತಿಪರವಾಗಿತ್ತು. ರೋಗಿಗಳಾಗಲಿ, ಸಿಬ್ಬಂದಿಯಾಗಲಿ ಅವರ ವಿರುದ್ಧ ಎಂದೂ ದೂರು ನೀಡಲಿಲ್ಲ’’ ಎಂದು ಬಾಬರ್ ಹೇಳಿದ್ದಾರೆ.

ಭಯೋತ್ಪಾದನಾ ಚಟುವಟಿಕೆಗಳಲ್ಲಿ ಆದಿಲ್ ಭಾಗಿಯಾಗಿರುವ ಕುರಿತು ನಿರಾಶೆ ವ್ಯಕ್ತಪಡಿಸಿರುವ ಬಾಬರ್, ಇಂತಹ ವಿದ್ಯಾವಂತರು ನಾಚಿಕೆಗೇಡಿನ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದರು.

ಆದಿಲ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಕುರಿತು ಬಾಬಾರ್, ಆಸ್ಪತ್ರೆಯ ನಾಲ್ವರು ಆತನ ವಿವಾಹದಲ್ಲಿ ಪಾಲ್ಗೊಂಡಿದ್ದೆವು. ನಾವು ಸಹೋದ್ಯೋಗಿಗಳಾಗಿ ಓರ್ವ ವೈದ್ಯನ ವಿವಾಹಕ್ಕೆ ಹೋಗಿದ್ದೆವು. ಭಯೋತ್ಪಾದಕನ ವಿವಾಹಕ್ಕೆ ಅಲ್ಲ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News