×
Ad

ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನಗಳ ಹೆಚ್ಚಿನ ತಪಾಸಣೆಗೆ ಡಿಜಿಸಿಎ ಆದೇಶ

Update: 2025-06-13 22:26 IST

ಏರ್‌ಇಂಡಿಯಾ | pc : Air India

ಹೊಸದಿಲ್ಲಿ: ಗುರುವಾರ ಅಹ್ಮದಾಬಾದ್‌ ನಲ್ಲಿ ಏರ್ ಇಂಡಿಯಾದ ‘ಡ್ರೀಮ್‌ಲೈನರ್’ವಿಮಾನವು ಪತನಗೊಂಡ ಹಿನ್ನೆಲೆಯಲ್ಲಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ತನ್ನ ಸ್ಥಳೀಯ ಕಚೇರಿಗಳ ಸಮನ್ವಯದೊಂದಿಗೆ ಏರ್‌ಇಂಡಿಯಾದ ಎಲ್ಲ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನಗಳ ಹೆಚ್ಚಿನ ಸುರಕ್ಷತಾ ತಪಾಸಣೆಗೆ ಶುಕ್ರವಾರ ಆದೇಶಿಸಿದೆ. ಏರ್ ಇಂಡಿಯಾ ತನ್ನ ವಿಮಾನಗಳ ಸಮೂಹದಲ್ಲಿ 27 ಬೋಯಿಂಗ್ 787-8 ಮತ್ತು ಏಳು ಬೋಯಿಂಗ್ 787-9ಗಳನ್ನು ಹೊಂದಿದೆ.

ಡಿಜಿಸಿಎ ತನ್ನ ಆದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜೆಂಕ್ಸ್ ಇಂಜಿನ್‌ ಗಳನ್ನು ಹೊಂದಿರುವ ಬಿ787-8/787-9 ವಿಮಾನಗಳಲ್ಲಿ ಆರು ಹೆಚ್ಚುವರಿ ನಿರ್ವಹಣೆ ಕ್ರಮಗಳನ್ನು ತಕ್ಷಣದಿಂದ ಜಾರಿಗೊಳಿಸುವಂತೆ ಸೂಚಿಸಿದೆ.

ಏರ್ ಇಂಡಿಯಾ ಡಿಜಿಸಿಎದ ಪ್ರಾದೇಶಿಕ ಕಚೇರಿಗಳ ಸಮನ್ವಯದೊಂದಿಗೆ ತಪಾಸಣೆಗಳನ್ನು ನಡೆಸಲಿದೆ. ಆದೇಶದ ಪ್ರಕಾರ ಜೂ.15ರಿಂದ ಡ್ರೀಮ್‌ಲೈನರ್ ವಿಮಾನಗಳು ಭಾರತದಿಂದ ನಿರ್ಗಮಿಸುವ ಮುನ್ನ ಆರು ಮಾನದಂಡಗಳಲ್ಲಿ ಅವುಗಳನ್ನು ಒಂದು ಬಾರಿ ತಪಾಸಣೆಗೆ ಒಳಪಡಿಸಬೇಕು.

ಆದೇಶಿಸಲಾಗಿರುವ ಹೆಚ್ಚುವರಿ ತಪಾಸಣೆಗಳ ಕುರಿತು ವರದಿಯನ್ನು ಸಲ್ಲಿಸುವಂತೆಯೂ ಡಿಜಿಸಿಎ ಏರ್ ಇಂಡಿಯಾಕ್ಕೆ ಸೂಚಿಸಿದೆ.

ಡ್ರೀಮ್‌ಲೈನರ್‌ಗಳನ್ನು ಸ್ಥಗಿತಗೊಳಿಸುವಂತೆ ಸರಕಾರವು ಆದೇಶಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಡಿಜಿಸಿಎ ಈ ಕ್ರಮವನ್ನು ತೆಗೆದುಕೊಂಡಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ಬೋಯಿಂಗ್ 787 ವಿಮಾನಗಳನ್ನು ಕಾರ್ಯಾಚರಿಸುತ್ತಿರುವ ಎರಡು ಭಾರತೀಯ ವಿಮಾನಯಾನ ಸಂಸ್ಥೆಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News