×
Ad

ಆರೆಸ್ಸೆಸ್‌ ಸಮವಸ್ತ್ರ ಧರಿಸಿ, ರಕ್ತದಲ್ಲಿ ಸ್ನಾನ ಮಾಡುತ್ತಿರುವಂತೆ ಚಿತ್ರಿಸಿರುವ ನಟ ವಿಜಯ್ ಅವರ ಪೋಸ್ಟರ್ ಹಂಚಿಕೊಂಡ ಡಿಎಂಕೆ

Update: 2025-10-18 16:59 IST

Photo Credit : X \ @DMKITwing

ಚೆನ್ನೈ, ಅ. 18: ಕರೂರ್ ದುರಂತದ ಹಿನ್ನೆಲೆಯಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ವಿರುದ್ಧ ಆಡಳಿತಾರೂಢ ಡಿಎಂಕೆ ತೀವ್ರ ವಾಗ್ದಾಳಿ ನಡೆಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ವಿವಾದಾತ್ಮಕ ಪೋಸ್ಟರ್ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಡಿಎಂಕೆಯ ಐಟಿ ವಿಭಾಗವು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟರ್‌ನಲ್ಲಿ ವಿಜಯ್ ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸಮವಸ್ತ್ರದಲ್ಲಿ, ಟಿವಿಕೆ ಧ್ವಜದ ಬಣ್ಣದ ಶಾಲು ಹೊದ್ದುಕೊಂಡು ಬೆನ್ನು ತಿರುಗಿಸಿ ನಿಂತಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಪೋಸ್ಟರ್‌ ನ ಹಿನ್ನೆಲೆಯಲ್ಲಿ ರಕ್ತದ ಕಲೆಗಳನ್ನು ಸೂಚಿಸುವ ಕೆಂಪು ಕೈ ಗುರುತುಗಳ ಗ್ರಾಫಿಕ್ ಸೇರಿಸಲಾಗಿದೆ. ಈ ಪೋಸ್ಟ್‌ಗೆ #JusticeForKarurVictims ಹ್ಯಾಶ್‌ಟ್ಯಾಗ್ ಬಳಸಲಾಗಿದೆ.

ಡಿಎಂಕೆ ತನ್ನ ಪೋಸ್ಟ್‌ನಲ್ಲಿ ವಿಜಯ್ ಕರೂರ್ ದುರಂತದ ಸಂತ್ರಸ್ತರ ನೋವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದೆ. “ಘಟನೆ ನಡೆದು 20 ದಿನಗಳಾದರೂ ವಿಜಯ್ ಸ್ಥಳಕ್ಕೆ ಭೇಟಿ ನೀಡಿಲ್ಲ. ಅವರ ‘ಸ್ಕ್ರಿಪ್ಟ್’ ಇನ್ನೂ ಸಿದ್ಧವಾಗಿಲ್ಲವೇ?” ಎಂದು ಡಿಎಂಕೆ ವ್ಯಂಗ್ಯವಾಡಿದೆ.

ವಿಜಯ್ ಸ್ಥಳಕ್ಕೆ ಭೇಟಿ ನೀಡದಿರುವ ಕುರಿತು ಅವರು ನೀಡಬಹುದಾದ ಕಾರಣವನ್ನೂ ಡಿಎಂಕೆ ಪ್ರಶ್ನಿಸಿದ್ದು, “ಅನುಮತಿ ಸಿಗಲಿಲ್ಲ ಎಂಬ ಹಳೆಯ ನೆಪವನ್ನೇ ಮತ್ತೆ ಹೇಳಲು ಯೋಜನೆಯಿದೆಯೇ?” ಎಂದು ಕಿಡಿಕಾರಿದೆ..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News