×
Ad

ಐಶಾರಾಮಿ ಕಾರುಗಳ ತೆರಿಗೆಗಳ್ಳತನ ಆರೋಪ : ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ನಿವಾಸಗಳಿಗೆ ಡಿಆರ್‌ಐ ದಾಳಿ

Update: 2025-09-23 22:23 IST

ದುಲ್ಕರ್ ಸಲ್ಮಾನ್(X), ಪೃಥ್ವಿರಾಜ್ (@PrithviOfficial)

ಕೊಚ್ಚಿ,ಸೆ.23: ಐಶಾರಾಮಿ ಕಾರು ತೆರಿಗೆಗಳ್ಳತನದ ವಿರುದ್ಧ ಕಂದಾಯ ಬೇಹುಗಾರಿಕೆ (ಡಿಆರ್‌ಐ) ಹಾಗೂ ಕಸ್ಟಮ್ಸ್ ಇಲಾಖೆ, ಮುಖ್ಯವಾಗಿ ಸೇರಿದಂತೆ ರಾಷ್ಟ್ರವ್ಯಾಪಿಯಾಗಿ‘ನಮ್‌ಖೋರ್’ಸಂಕೇತನಾಮದಡಿ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಕೊಚ್ಟಿಯಲ್ಲಿ ಖ್ಯಾತ ನಟರಾದ ದುಲ್ಕರ್ ಸಲ್ಮಾನ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಅವರ ನಿವಾಸಗಳ ಮೇಲೆ ಮಂಗಳವಾರ ದಾಳಿ ನಡೆಸಿದೆ.

ಆದರೆ ಈ ಇಬ್ಬರೂ ತಾರೆಯರ ನಿವಾಸಗಳಲ್ಲಿ ತೆರಿಗೆಗಳ್ಳತನ ನಡೆಸಿದ್ದೆನ್ನಲಾದ ವಾಹನಗಳನ್ನು ಪತ್ತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲವೆಂದು ತಿಳಿದುಬಂದಿದೆ.

ಕಸ್ಟಮ್ಸ್ ಅಧಿಕಾರಿಗಳು ಕೇರಳಾದ್ಯಂತದ ಪ್ರಮುಖ ಕಾರ್ ಶೋರೂಮ್‌ಗಳಲ್ಲಿಯೂ ತಪಾಸಣೆ ನಡೆಸುವುದಕ್ಕಾಗಿ ಮೋಟಾರ್ ವಾಹನಗಳ ಇಲಾಖೆಯ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ತಿರುವನಂತಪುರಂ, ಎರ್ನಾಕುಲಂ,ಕೊಟ್ಟಾಯಂ, ಕೋಝಿಕೋಡ್ ಹಾಗೂ ಮಲಪುರಂ ಜಿಲ್ಲೆಗಳಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಎಂಟು ವಿಧದ ಐಶಾರಾಮಿ ವಾಹನಗಳನ್ನು ತೆರಿಗೆ ಪಾವತಿ ತಪ್ಪಿಸಿ ಭೂತಾನ್ ಮಾರ್ಗವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News