×
Ad

ಉತ್ತರ ಪ್ರದೇಶ | ಮೆಡಿಕಲ್ ಶಾಪ್ ಗಳಿಂದ ಲಂಚಕ್ಕೆ ಬೇಡಿಕೆ; ಮಹಿಳಾ ಡ್ರಗ್ ಇನ್ಸ್ಪೆಕ್ಟರ್ ಅಮಾನತು

Update: 2025-01-01 11:38 IST

screengrab:X/@AbhishekSay

ಶಾಮ್ಲಿ(ಉತ್ತರ ಪ್ರದೇಶ): ಮೆಡಿಕಲ್ ಶಾಪ್ ಮಾಲೀಕರಿಂದ ಲಂಚ ಕೇಳುತ್ತಿದ್ದ ಡ್ರಗ್ ಇನ್ಸ್ಪೆಕ್ಟರ್ ನಿಧಿ ಪಾಂಡೆ ಅವರನ್ನು ಅಮಾನತುಗೊಳಿಸಲಾಗಿದೆ.

ಭ್ರಷ್ಟಾಚಾರದ ಆರೋಪದ ಮೇಲೆ ನಿಧಿ ಪಾಂಡೆ ಅವರನ್ನು ಶಾಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಾನತುಗೊಳಿದ್ದಾರೆ. ಡ್ರಗ್ ಇನ್ಸ್ಪೆಕ್ಟರ್ ನಿಧಿ ವಿರುದ್ಧ ಭ್ರಷ್ಟಾಚಾರ ಮತ್ತು ಲಂಚದ ಹಲವು ದೂರುಗಳಿದ್ದವು. ಆಕೆ ಆ ಪ್ರದೇಶದ ಮೆಡಿಕಲ್ ಸ್ಟೋರ್ ಮಾಲೀಕರಿಂದ ಸಾವಿರಾರು ರೂಪಾಯಿ ಲಂಚಕ್ಕೆ ಬೇಡಿಕೆಯಿರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಅಂಗಡಿಯೊಂದರ ಮಾಲೀಕ ದೇವರಾಜ್ ಮಲಿಕ್ ಅವರು ಡ್ರಗ್ ಇನ್ಸ್ಪೆಕ್ಟರ್ ನಿಧಿ ಪಾಂಡೆ ವಿರುದ್ಧ ಪ್ರಮಾಣ ಪತ್ರ ನೀಡಲು, ಅನುಮತಿಗಳಿಗಾಗಿ ಲಂಚ ಕೇಳುತ್ತಿದ್ದಾರೆ. ಲಂಚ ನೀಡದಿದ್ದರೆ ನಿರಾಕರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಅನೇಕ ಬಾರಿ ದೂರು ನೀಡಿದ್ದರು.

ಅದರೊಂದಿಗೆ ಡ್ರಗ್ ಇನ್ಸ್ಪೆಕ್ಟರ್ ನಿಧಿ ಪಾಂಡೆ ಲಂಚಕ್ಕೆ ಬೇಡಿಕೆಯಿಡುವ ಮತ್ತು ಅಂಗಡಿಯವರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

ಈ ವಿಚಾರ ಶಾಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಗಮನಕ್ಕೆ ಬರುತ್ತಿದ್ದಂತೆ, ಈ ಕುರಿತು ಡಿಎಂ ತನಿಖೆಗೆ ಆದೇಶಿಸಿದ್ದರು. ಲಂಚದ ಬೇಡಿಕೆಯ ಆರೋಪಗಳು ಪ್ರಾಥಮಿಕವಾಗಿ ಸಾಬೀತಾಗಿದ್ದರಿಂದ ನಿಧಿ ಪಾಂಡೆ ಅವರನ್ನು ಅವರ ಹುದ್ದೆಯಿಂದ ಅಮಾನತುಗೊಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News