×
Ad

ಶುಕ್ರವಾರ ಮತ್ತೆ ಏರಿದ ಚಿನ್ನದ ಬೆಲೆ

2026ರಲ್ಲೂ ಚಿನ್ನದ ಬೆಲೆ ಏರಿಕೆ ಸಾಧ್ಯತೆ

Update: 2025-12-05 14:48 IST

ಸಾಂದರ್ಭಿಕ ಚಿತ್ರ

ರೂಪಾಯಿ ಮೌಲ್ಯ ಕುಸಿತ, ಕೇಂದ್ರೀಯ ಬ್ಯಾಂಕ್ಗಳ ನಿರ್ಧಾರಗಳ ಪರಿಣಾಮ ಚಿನ್ನದ ಬೆಲೆಯ ಮೇಲೂ ಆಗುತ್ತಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಪ್ರತಿದಿನವೂ ಏರಿಳಿತ ಕಂಡುಬರುತ್ತಿದೆ. ಮಂಗಳವಾರ ಇಳಿಕೆಯಾಗಿದ್ದ ಚಿನ್ನದ ಬೆಲೆ ಬುಧವಾರ ದಿಢೀರ್‌ ಏರಿಕೆಯಾಗಿತ್ತು. ಗುರುವಾರ ಸ್ವಲ್ಪ ಇಳಿಕೆ ದಾಖಲಿಸಿತ್ತು. ಇದೀಗ ಶುಕ್ರವಾರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.

ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ

ಶುಕ್ರವಾರದಂದು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ರೂ 1,29,862 ಗಳಲ್ಲಿ ವಹಿವಾಟು ಆರಂಭಿಸಿತು ಮತ್ತು ಮಧ್ಯಾಹ್ನ 12:48 ರ ವೇಳೆಗೆ ಸುಮಾರು ರೂ 1,30,750 ಗಳಲ್ಲಿ ಮುಂದುವರೆದಿದೆ. ಇದು ಹಿಂದಿನ ಮುಕ್ತಾಯಕ್ಕಿಂತ 0.52 ಪ್ರತಿಶತ ಹೆಚ್ಚಾಗಿದೆ. ಈ ನಡುವೆ, ಭಾರತೀಯ ಕಾಲಮಾನ ಮಧ್ಯಾಹ್ನ 12:50 ಕ್ಕೆ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 90.129 ಕ್ಕೆ ತಲುಪಿದ್ದು, ಒಂದು ವಾರದ ಹಿಂದೆಗೆ ಹೋಲಿಸಿದರೆ ಶೇ 0.86 ರಷ್ಟು ಕುಸಿತ ಕಂಡುಬಂದಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?

ಗುರುವಾರ ಮಂಗಳೂರಿನಲ್ಲಿ ಹತ್ತು ಗ್ರಾಂ ಬಂಗಾರದ ಬೆಲೆ ಶುಕ್ರವಾರ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ರೂ. 12,993 (+27), 22 ಕ್ಯಾರೆಟ್ ಚಿನ್ನಕ್ಕೆ ರೂ. 11,910 (+25) ಮತ್ತು 18 ಕ್ಯಾರೆಟ್ ಚಿನ್ನಕ್ಕೆ ರೂ. 99,745 (+21)ಬೆಲೆಗೆ ಏರಿದೆ.

ಫೆಡ್ ದರದಲ್ಲಿನ ಬದಲಾವಣೆಗಳ ಸಂಭವನೀಯತೆಯನ್ನು ಪತ್ತೆಹಚ್ಚುವ ಫೆಡ್‌ವಾಚ್ ಡೇಟಾದ ಪ್ರಕಾರ, “ಡಿಸೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಫೆಡರಲ್ ರಿಸರ್ವ್ ಸಭೆಯಲ್ಲಿ 350-375 ಗುರಿ ದರದ ಮೂಲ ಅಂಕಗಳ ಸಂಭವನೀಯತೆಗೆ ಬಡ್ಡಿದರದ ವ್ಯಾಪಾರಿಗಳು ಈಗ ಶೇ 87 ರಷ್ಟು ಮತ ಚಲಾಯಿಸಿದ್ದಾರೆ. ಇವು ಚಿನ್ನದ ಬೆಲೆಯಲ್ಲಿನ ಏರಿಳಿತಕ್ಕೆ ಕಾರಣವಾಗುತ್ತಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಪ್ರಾಫಿಟ್‌ ಬುಕಿಂಗ್‌ಗೆ ಮುಂದಾದ ಕಾರಣ ಚಿನ್ನದ ಬೆಲೆಗಳು ದಿಢೀರನೆ ಕುಸಿದವು. ಇದರ ಪರಿಣಾಮ ಗುರುವಾರ ದೇಶೀ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿತ್ತು. ಆದರೆ, ಫೆಡರಲ್ ಬಡ್ಡಿ ದರ ಕಡಿತದ ನಿರೀಕ್ಷೆಗಳು ಬಲಗೊಳ್ಳುತ್ತಿರುವುದು ಪ್ರಸ್ತುತ ಚಿನ್ನದ ದರಗಳು ಸತತವಾಗಿ ಏರಲು ಕಾರಣವಾಗುತ್ತಿವೆ.

2026ರಲ್ಲೂ ಚಿನ್ನದ ಬೆಲೆ ಏರಿಕೆ ಸಾಧ್ಯತೆ

2026ರ ವಿತ್ತೀಯ ವರ್ಷದಲ್ಲಿ ಚಿನ್ನದ ಬೆಲೆಗಳು ಪ್ರಸ್ತುತ ಮಟ್ಟದಿಂದ ಶೇ 15 ರಿಂದ ಶೇ 30 ರಷ್ಟು ಏರಿಕೆಯಾಗಬಹುದು ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ಹೇಳಿಕೆ ತಿಳಿದಿಸೊದೆ

ಮಾರುಕಟ್ಟೆ ತಜ್ಞರ ಪ್ರಕಾರ, ಈ ಅಮೂಲ್ಯ ಲೋಹವು ಮತ್ತೊಂದು ಸ್ಫೋಟಕ ಹೆಜ್ಜೆಯ ಏರಿಕೆಗೆ ಸಿದ್ಧವಾಗುತ್ತಿದೆ. ಇತ್ತೀಚಿನ ವರದಿಯಲ್ಲಿ, ಬ್ರೋಕರೇಜ್ ಹೌಸ್ ವೆಂಚುರಾ, "ಕೇಂದ್ರೀಯ ಬ್ಯಾಂಕ್ ಖರೀದಿ, ಹಣದುಬ್ಬರದ ದೃಢತೆ, ಅಮೆರಿಕದ ಅರ್ಥವ್ಯವಸ್ಥೆಯ ಏರಿಳಿತ, ಭೌಗೋಳಿಕ ರಾಜಕೀಯ ಮತ್ತು ಸುಂಕಗಳ ಸುತ್ತಲಿನ ಕಳವಳದಿಂದ ಎದ್ದಿರುವ ಮಿಶ್ರ ಅಭಿಪ್ರಾಯವು ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಗಳನ್ನು 4,600 ಡಾಲರ್ನಿಂದ 4,800 ಡಾಲರ್ ವ್ಯಾಪ್ತಿಗೆ ತಳ್ಳಬಹುದು” ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News