×
Ad

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರಮಾಣವಚನ ಸ್ವೀಕರಿಸುವಾಗ ವಿಪಕ್ಷಗಳಿಂದ “ಶೇಮ್‌ ಶೇಮ್”‌ ಘೋಷಣೆ

Update: 2024-06-24 12:12 IST

Photo: X/ANI

ಹೊಸದಿಲ್ಲಿ: ಲೋಕಸಭಾ ಚುನಾವಣೆಯ ನಂತರ ಇಂದು ನಡೆದ ಸಂಸತ್ತಿನ ಪ್ರಥಮ ಅಧಿವೇಶನದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಪ್ರಮಾಣವಚನ ಸ್ವೀಕರಿಸುವಾಗ ವಿಪಕ್ಷ ಸದಸ್ಯರಿಂದ “ಶೇಮ್‌ ಶೇಮ್” ಘೋಷಣೆಗಳು ಮೊಳಗಿದವು. ನೀಟ್‌ ಅವ್ಯವಹಾರಗಳ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಸಾಕಷ್ಟು ಟೀಕೆಗಳು ಎದುರಿಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ.

ಧರ್ಮೇಂದ್ರ ಪ್ರಧಾನ್‌ ಅವರು ಸಂಭಲಪುರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಡಿಯ ಪ್ರಣಬ್‌ ಪ್ರಕಾಶ್‌ ದಾಸ್‌ ಅವರನ್ನು 1.19 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು.

ದೇಶಾದ್ಯಂತ ನೀಟ್‌ ಅವ್ಯವಹಾರಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News