×
Ad

ಚುನಾವಣೆಯಲ್ಲಿ ಸ್ಪರ್ಧಿಸದ 334 ಪಕ್ಷಗಳನ್ನು ರದ್ದುಗೊಳಿಸಿದ ಚುನಾವಣಾ ಆಯೋಗ

Update: 2025-08-09 21:38 IST

ಚುನಾವಣಾ ಆಯೋಗ | PC : PTI 

ಹೊಸದಿಲ್ಲಿ, ಆ. 9: 2019ರ ನಂತರದ ಆರು ವರ್ಷಗಳಲ್ಲಿ ಒಂದಾದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲ ಶರತ್ತನ್ನು ಈಡೇರಿಸಲು ವಿಫಲವಾಗಿರುವ 334 ನೋಂದಾಯಿತ ಮಾನ್ಯತೆರಹಿತ ರಾಜಕೀಯ ಪಕ್ಷಗಳನ್ನು ರದ್ದುಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.

ಈ ಪಕ್ಷಗಳ ಕಚೇರಿಗಳನ್ನೂ ಭೌತಿಕವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಈ 334 ನೋಂದಾಯಿತ ಮಾನ್ಯತೆರಹಿತ ರಾಜಕೀಯ ಪಕ್ಷಗಳು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿವೆ. ಒಟ್ಟು 2,854 ನೋಂದಾಯಿತ ಮಾನ್ಯತೆರಹಿತ ರಾಜಕೀಯ ಪಕ್ಷಗಳ ಪೈಕಿ, ವಿಲೇವಾರಿ ಪ್ರಕ್ರಿಯೆ ಬಳಿಕ 2,520 ಉಳಿದುಕೊಂಡಿವೆ.

ಇದನ್ನು ಹೊರತುಪಡಿಸಿ 6 ರಾಜಕೀಯ ಪಕ್ಷಗಳು ಮತ್ತು 67 ಪ್ರಾದೇಶಿಕ ಪಕ್ಷಗಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News