×
Ad

ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣ: ರೋನಾ ವಿಲ್ಸನ್‌ಗೆ ಜಾಮೀನು ನಿರಾಕರಣೆ

Update: 2024-12-17 20:59 IST

ರೋನಾ ವಿಲ್ಸನ್‌ | PC : indianexpress

ಮುಂಬೈ: ಸೊಸೆಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿ ರೋನಾ ವಿಲ್ಸನ್‌ಗೆ ಮಧ್ಯಂತರ ಜಾಮೀನು ನೀಡಲು ಇಲ್ಲಿನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ನಿರಾಕರಿಸಿದೆ.

ಇದು ‘‘ಸಾಕಷ್ಟು ದೂರದ ಸಂಬಂಧ’’ ಹಾಗೂ ಅಲ್ಲಿ ಅವರ ಉಪಸ್ಥಿತಿಯ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಈ ಪ್ರಕರಣವನ್ನು ಹಸ್ತಾಂತರಿಸುವುದಕ್ಕಿಂತ ಮುನ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ಪುಣೆ ಪೊಲೀಸರು ದಿಲ್ಲಿಯಲ್ಲಿರುವ ರೋನಾ ವಿಲ್ಸನ್ ಅವರ ನಿವಾಸದ ಮೇಲೆ 2018 ಜೂನ್‌ನಲ್ಲಿ ದಾಳಿ ನಡೆಸಿದ್ದರು ಹಾಗೂ ಅವರನ್ನು ಬಂಧಿಸಿದ್ದರು.

ಪ್ರಸಕ್ತ ರೋನಾ ವಿಲ್ಸನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನು ಮಹಾರಾಷ್ಟ್ರದ ನವಿ ಮುಂಬೈಯ ತಲೋಜಾ ಕಾರಾಗೃಹದಲ್ಲಿ ಇರಿಸಲಾಗಿದೆ.

ತನ್ನ ಸೊಸೆ (ಸೋದರ ಸಂಬಂಧಿಯ ಸಹೋದರಿಯ ಪುತ್ರಿ)ಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು 2025 ಜನವರಿ 6ರಿಂದ 20ರ ವರೆಗೆ ಮಧ್ಯಂತರ ಜಾಮೀನು ನೀಡುವಂತೆ ರೋನಾ ವಿಲ್ಸನ್ ಇತ್ತೀಚೆಗೆ ಕೋರಿದ್ದರು. ಆದರೆ, ವಿಶೇಷ ನ್ಯಾಯಾಧೀಶ ಚಾಕೋರ್ ಬವಿಷ್ಕರ್ ಅವರ ಅರ್ಜಿಯನ್ನು ಡಿಸೆಂಬರ್ 13ರಂದು ತಿರಸ್ಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News