ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿಗೆ ಸಾಂವಿಧಾನಿಕ ಮಾನ್ಯತೆ ಇದೆ: ಸಂಜಯ್ ರಾವತ್
ಸಂಜಯ್ ರಾವತ್ (File Photo: PTI)
ಮುಂಬೈ: ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿಗೆ ಸಾಂವಿಧಾನಿಕ ಮಾನ್ಯತೆ ಇದೆ. ಆದ್ದರಿಂದ ನೀವು ಅದನ್ನು 'ಸಂವಿಧಾನ ಹತ್ಯಾ ದಿವಸ್' ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಉದ್ಧವ್ ನೇತೃತ್ವದ ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ʼಸಂವಿಧಾನವನ್ನು ಸಂಪೂರ್ಣವಾಗಿ ಗೌರವಿಸುವ ಮೂಲಕ, ಇಂದಿರಾ ಗಾಂಧಿ ಆ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ತುರ್ತು ಪರಿಸ್ಥಿತಿಗೆ ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಮಾನ್ಯತೆ ಇದೆ. ಆದ್ದರಿಂದ ನೀವು ಅದನ್ನು 'ಸಂವಿಧಾನ ಹತ್ಯೆ ದಿವಸ್' ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಂದಿರಾ ಗಾಂಧಿಯವರಿಗೆ ಹಣವನ್ನು ಬಳಸಿಕೊಂಡು ಚುನಾವಣೆಗಳನ್ನು ಗೆಲ್ಲಬಹುದಿತ್ತು. ಆದರೆ, ಇಂದಿರಾ ಗಾಂಧಿ ಆ ರೀತಿ ಮಾಡಲಿಲ್ಲ. ಇಂದಿರಾ ಜಿ ಅವರು ಪ್ರಜಾಪ್ರಭುತ್ವದ 'ಚೌಕಿದಾರ್' ಆಗಿದ್ದರು. ಕಳೆದ 11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
1975 ಜೂನ್ 25ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ತುರ್ತು ಪರಿಸ್ಥಿತಿ ಹೇರಿ ಬುಧವಾರಕ್ಕೆ ಸರಿಯಾಗಿ 50 ವರ್ಷವಾಗಿದೆ.