×
Ad

ದಿಲ್ಲಿ ವಿವಿ ಮಾಜಿ ಪ್ರೊ. ಸಾಯಿಬಾಬಾ ಅವರ ಸಾವಿಗೆ UAPA ಕಾರಣ: ಸಂಸದ ಅಸದುದ್ದೀನ್ ಉವೈಸಿ

Update: 2024-10-13 12:29 IST

ಅಸದುದ್ದೀನ್ ಉವೈಸಿ (Photo: PTI)

ಹೈದರಾಬಾದ್: ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರೊಫೆಸರ್ ಜಿ ಎನ್ ಸಾಯಿಬಾಬಾ ಅವರ ಮೃತ್ಯುವಿಗೆ ಭಾಗಶಃ UAPA ಕಾಯ್ದೆಯ ಪರಿಣಾಮವಾಗಿದೆ. ಈ ಕಾಯ್ದೆಯು ಆರೋಪಿಗಳನ್ನು ದೀರ್ಘಾವಧಿಯವರೆಗೆ ಜೈಲಿನಲ್ಲಿಡಲು ಅನುವು ಮಾಡಿಕೊಡುತ್ತದೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಸಾಯಿಬಾಬಾ ಅವರ ನಿಧನ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆಯ ಕುರಿತು ತಮ್ಮ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಉವೈಸಿ, ಶನಿವಾರ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ, “ಒಂದೇ ದಿನದಲ್ಲಿ ಎರಡು ಸಾವುಗಳು ನಿಜವಾದ ವಿನಾಶಕಾರಿ ಸುದ್ದಿ” ಎಂದು ಹೇಳಿದ್ದಾರೆ. ಶಂಕಿತ ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಸಾಯಿಬಾಬಾ ಅವರನ್ನು ದೋಷಮುಕ್ತರಾದ ಏಳು ತಿಂಗಳ ನಂತರ, ಶಸ್ತ್ರಚಿಕಿತ್ಸೆಯ ನಂತರದ ತೊಡಕುಗಳಿಂದ ಶನಿವಾರ ರಾತ್ರಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾಯಿಬಾಬಾ ನಿಧನರಾದರು.

“ಪ್ರೊ.ಸಾಯಿಬಾಬಾರವರ ಸಾವು ಕೂಡ ಬಹಳ ಕಳವಳಕಾರಿಯಾಗಿದೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನಿಮ್ಮನ್ನು ದೀರ್ಘಾವಧಿಯವರೆಗೆ ಜೈಲಿನಲ್ಲಿ ಇರಿಸಲು ಪೊಲೀಸರಿಗೆ ಅನುವು ಮಾಡಿಕೊಡುವ UAPA ಕೂಡ ಭಾಗಶಃ ಅವರ ಸಾವಿನ ಮೇಲೆ ಪರಿಣಾಮ ಬೀರಿದೆ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಹೇಳಿದ್ದಾರೆ.

ಬಾಬಾ ಸಿದ್ದಿಕ್ ಅವರ ಹತ್ಯೆಯನ್ನು "ಅತ್ಯಂತ ಖಂಡನೀಯ" ಎಂದು ಬಣ್ಣಿಸಿದ ಉವೈಸಿ, "ಇದು ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಾಹ್ ಅವರಿಗೆ ಮಗ್ಫಿರಹ್ ನೀಡಲಿ. ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನನ್ನ ಸಂತಾಪಗಳು," ಎಂದು ಉವೈಸಿ ಪೋಸ್ಟ್ ಮಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News