ಉದ್ಧವ್ ಠಾಕ್ರೆ ಶಿವಸೇನಾಗೆ ಮಾಜಿ ಸಚಿವ ಬಾಬನ್ ಘೋಲಪ್ ರಾಜೀನಾಮೆ
Update: 2024-02-15 20:45 IST
Credit: X/@baban_gholap
ನಾಸಿಕ್: ಮಹಾರಾಷ್ಟ್ರದ ಮಾಜಿ ಸಚಿವ ಬಾಬನ್ ಘೋಲಪ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ (ಯುಬಿಟಿ)ಗೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ನಾಸಿಕ್ ರೋಡ್-ದೇವಲಾಲಿ ವಿಧಾನ ಸಭಾ ಕ್ಷೇತ್ರವನ್ನು ನಿರಂತರ 5 ಬಾರಿ ಪ್ರತಿನಿಧಿಸಿದ್ದ ಘೋಲಪ್ ಅವರು ಶಿವಸೇನಾ (ಯುಬಿಟಿ)ದ ಉಪ ನಾಯಕನ ಸ್ಥಾನಕ್ಕೆ ಕಳೆದ ವರ್ಷ ಡಿಸೆಂಬರ್ನಲ್ಲಿ ರಾಜೀನಾಮೆ ನೀಡಿದ್ದರು. ಆದರೆ, ಪಕ್ಷ ಅವರ ರಾಜೀನಾಮೆ ಸ್ವೀಕರಿಸಿರಲಿಲ್ಲ.
ತಾನು ‘ಶಿವಸೈನಿಕ’ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಉದ್ದವ್ ಠಾಕ್ರೆ ಅವರಿಗೆ ಗುರುವಾರ ಸಲ್ಲಿಸಿದ ಒಂದು ಸಾಲಿನ ರಾಜೀನಾಮೆ ಪತ್ರದಲ್ಲಿ ಘೋಲಪ್ ಹೇಳಿದ್ದಾರೆ. ಈ ಪತ್ರವನ್ನು ಅವರು ತನ್ನ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಅವರು ತನ್ನ ಮುಂದಿನ ರಾಜಕೀಯ ನಡೆಯ ಬಗ್ಗೆ ಬಹಿರಂಗಪಡಿಸಿಲ್ಲ.