×
Ad

ಕೇರಳದಲ್ಲಿ ನಿಂತಿರುವ ಬ್ರಿಟಿಷ್ ಎಫ್-35ಬಿ ಫೈಟರ್ ಜೆಟ್ ದುರಸ್ತಿಗೆ ತಜ್ಞರೊಂದಿಗೆ ಆಗಮಿಸಿದ ʼಏರ್‌ಬಸ್‌ A400M ಅಟ್ಲಾಸ್ʼ

Update: 2025-07-06 20:39 IST

Photo | NDTV

ತಿರುವನಂತಪುರಂ : ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟಿಷ್ ರಾಯಲ್ ನೇವಿ ಎಫ್-35ಬಿ ಯುದ್ಧ ವಿಮಾನವನ್ನು ಪರಿಶೀಲಿಸಲು ʼಏರ್‌ಬಸ್‌ A400M ಅಟ್ಲಾಸ್ʼ 24 ಜನರ ತಂಡದೊಂದಿಗೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

24 ಜನರ ತಂಡದಲ್ಲಿ ಬ್ರಿಟಿಷ್ ರಾಯಲ್ ಏರ್‌ಫೋರ್ಸ್‌ನ 14 ತಾಂತ್ರಿಕ ತಜ್ಞರು ಮತ್ತು 10 ಮಂದಿ ಸಿಬ್ಬಂದಿಗಳಿದ್ದರು. ತಂಡವು ಯುದ್ಧ ವಿಮಾನವನ್ನು ಪರಿಶೀಲಿಸಿ ಅದನ್ನು ಸ್ಥಳೀಯವಾಗಿ ದುರಸ್ತಿ ಮಾಡಬಹುದೇ ಅಥವಾ ಅದನ್ನು ಬ್ರಿಟನ್‌ಗೆ ಸಾಗಿಸಬೇಕೇ ಎಂದು ನಿರ್ಧರಿಸಲಿದೆ.

ʼಏರ್‌ಬಸ್‌ A400M ಅಟ್ಲಾಸ್ ಹಿಂತಿರುಗಲು ಸಜ್ಜಾಗಿದೆ. ಆದರೆ, ಬ್ರಿಟಿಷ್ ತಜ್ಞರು ಎಫ್-35ಬಿ ಫೈಟರ್ ಜೆಟ್‌ನ್ನು ಪರಿಶೀಲನೆ ಮತ್ತು ದುರಸ್ತಿಗಾಗಿ ಕೇರಳದಲ್ಲಿಯೇ ಇರಲಿದ್ದಾರೆʼ ಎಂದು ಮೂಲಗಳು ತಿಳಿಸಿರುವ ಬಗ್ಗೆ NDTV ವರದಿ ಮಾಡಿದೆ.

ಈ ಬೆಳವಣಿಗೆಯಿಂದ ಬ್ರಿಟನ್ ಇನ್ನೂ ಎಫ್-35ಬಿ ವಿಮಾನವನ್ನು ಭಾರತದಿಂದ ಕೊಂಡೊಯ್ಯಲು ಯೋಜಿಸಿಲ್ಲ ಎಂಬುದು ಕಂಡು ಬರುತ್ತದೆ.

ವಿಮಾನವನ್ನು ಕೊಂಡೊಯ್ಯಲು ಬ್ರಿಟನ್ ʼಸಿ -17ʼ ಅನ್ನು ಕಳುಹಿಸಬೇಕಾಗುತ್ತದೆ. ಬ್ರಿಟನ್‌ನ ತಜ್ಞರು ಎಫ್ -35 ಬಿ ಫೈಟರ್ ಜೆಟ್‌ನ ಹೈಡ್ರಾಲಿಕ್‌ಗಳನ್ನು ದುರಸ್ತಿ ಮಾಡಲು ಮತ್ತು ಅದನ್ನು ಮತ್ತೆ ಹಾರಾಟ ನಡೆಸಲು ಪ್ರಯತ್ನಿಸಬಹುದು ಎಂದು ಮೂಲಗಳು ತಿಳಿಸಿವೆ.

ಜೂನ್ 14ರಂದು ಬ್ರಿಟನ್‌ನ ಎಫ್-35ಬಿ ಯುದ್ಧ ವಿಮಾನ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಹೇಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News