×
Ad

ಉತ್ತರ ಪ್ರದೇಶ | ಕನ್ವರ್‌ ಯಾತ್ರೆ ಟೀಕಿಸುವ ಕವಿತೆ ವಾಚಿಸಿದ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

Update: 2025-07-15 13:11 IST

ರಜನೀಶ್ ಗಂಗ್ವಾರ್ (Screengrab:X/@Benarasiyaa)

ಲಕ್ನೋ: ಕನ್ವರ್ ಯಾತ್ರೆಯನ್ನು ಟೀಕಿಸುವ ಕವಿತೆಯನ್ನು ಶಾಲೆಯಲ್ಲಿ ವಾಚಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಬರೇಲಿಯ ಸರ್ಕಾರಿ ಶಾಲಾ ಶಿಕ್ಷಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು The Indian Express ವರದಿ ಮಾಡಿದೆ.

ವಿವಾದಿತ ಕವಿತೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆ, ಶಿಕ್ಷಕರ ಕನ್ವರ್‌ ಭಕ್ತರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಜನೀಶ್ ಗಂಗ್ವಾರ್ ಎಂಬ ಶಿಕ್ಷಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕನ್ವರ್ ಸೇವಾ ಸಮಿತಿ ನೀಡಿದ ದೂರಿನ ಆಧಾರದ ಮೇಲೆ ಗಂಗ್ವಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗಂಗ್ವಾರ್ ಅವರನ್ನು ಇದುವರೆಗೆ ಬಂಧಿಸಿಲ್ಲ, ತನಿಖೆ ನಡೆಯುತ್ತಿದೆ ಎಂದು ಬಹೇರಿ ಸ್ಟೇಷನ್ ಹೌಸ್ ಅಧಿಕಾರಿ ಸಂಜಯ್ ತೋಮರ್ ತಿಳಿಸಿರುವುದಾಗಿ ವರದಿ ಹೇಳಿದೆ.

ವೈರಲ್ ವೀಡಿಯೊದಲ್ಲಿ, "ಕನ್ವರ್ ಯಾತ್ರೆಗೆ ಹೊರಡಬೇಡಿ" ಮತ್ತು "ಜ್ಞಾನದ ದೀಪವನ್ನು ಬೆಳಗಿಸಿ" ಎಂದು ಹೇಳುವ ವಾಕ್ಯ ರಚನೆಯಿದ್ದು, ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ವರ್ ಯಾತ್ರೆಯ ಸಂದರ್ಭದಲ್ಲಿ, ಕನ್ವರ್ಯರು ಎಂದು ಕರೆಯಲ್ಪಡುವ ಭಕ್ತರು ಹರಿದ್ವಾರ ಬಳಿಯ ಗಂಗಾ ನದಿಯಿಂದ ನೀರನ್ನು ಸಂಗ್ರಹಿಸಿ ತಮ್ಮ ಸ್ವಂತ ರಾಜ್ಯಗಳಿಗೆ ಕೊಂಡೊಯ್ಯಲು ನೂರಾರು ಕಿಲೋಮೀಟರ್ ನಡೆದು ದೇವಾಲಯಗಳಲ್ಲಿ ಅರ್ಪಿಸುತ್ತಾರೆ. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ದಿಲ್ಲಿ ಮತ್ತು ಮಧ್ಯಪ್ರದೇಶದಿಂದಲೂ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬರುತ್ತಾರೆ.

ಈ ವರ್ಷದ ಕನ್ವರ್ ಯಾತ್ರೆ ಶನಿವಾರ ಪ್ರಾರಂಭವಾಗಿದ್ದು, ಆಗಸ್ಟ್ 9 ರಂದು ಮುಕ್ತಾಯಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News