×
Ad

ಇಡಿಯಿಂದ ಓರ್ವ ಚೀನಿ ಪ್ರಜೆ ಸೇರಿದಂತೆ ನಾಲ್ವರು ವಿವೋ ಅಧಿಕಾರಿಗಳ ಬಂಧನ

Update: 2023-10-10 22:38 IST

Photo: PTI

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಚೀನಿ ಪ್ರಜೆ ಸೇರಿದಂತೆ ಚೀನಾದ ಸ್ಮಾರ್ಟ್ಫೋನ್ ತಯಾರಕ ವಿವೋದ ನಾಲ್ವರು ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ಈಡಿ ಮಂಗಳವಾರ ಬಂಧಿಸಿದೆ.

ಬಂಧಿತರನ್ನು ಇಲ್ಲಿಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ಅವರಿಗೆ ಮೂರು ದಿನಗಳ ಈಡಿ ಕಸ್ಟಡಿಯನ್ನು ವಿಧಿಸಲಾಗಿದೆ.

ಈ ಬಂಧನಗಳು ಭಾರತದಲ್ಲಿ ವಿವೋದ ಕಾನೂನು ತೊಂದರೆಗಳನ್ನು ಹೆಚ್ಚಿಸಿವೆ. ಭಾರತ-ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಬೆಳವಣಿಗೆ ನಡೆದಿದೆ. ‘ನಾವು ನಮ್ಮ ನೈತಿಕ ತತ್ತ್ವಗಳಿಗೆ ಮತ್ತು ಕಾನೂನು ಪಾಲನೆಗೆ ಬದ್ಧರಾಗಿದ್ದೇವೆ. ಇತ್ತೀಚಿನ ಬಂಧನಗಳು ನಮ್ಮನ್ನು ಆಳವಾದ ಚಿಂತೆಗೆ ತಳ್ಳಿವೆ. ನಾವು ಲಭ್ಯವಿರುವ ಎಲ್ಲ ಕಾನೂನು ಆಯ್ಕೆಗಳನ್ನು ಬಳಸಲಿದ್ದೇವೆ ’ ಎಂದು ವಿವೋ ಹೇಳಿಕೆಯಲ್ಲಿ ತಿಳಿಸಿದೆ.

2020ರ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿ ಈ ಬಂಧನಗಳು ನಡೆದಿವೆ. ಆಗ ಕಂಪನಿಯ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದ ಈಡಿ.,ಅದು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಕೊಂಡಿದೆ ಎಂದು ಆರೋಪಿಸಿತ್ತು.

ಕಂಪನಿಯು ತನ್ನ ವಿರುದ್ಧದ ಆರೋಪಗಳನ್ನು ಪದೇ ಪದೇ ನಿರಾಕರಿಸುತ್ತಲೇ ಬಂದಿದೆ.

ಚೀನಾದ ಬಿಬಿಕೆ ಇಲೆಕ್ಟ್ರಾನಿಕ್ಸ್ನ ಒಡೆತನದಲ್ಲಿರುವ ವಿವೋ ಭಾರತದಲ್ಲಿ ಒಪ್ಪೊ ಮತ್ತು ರಿಯಲ್ ಮಿ ಯಂತಹ ಇತರ ಬ್ರಾಂಡ್ ಗಳನ್ನೂ ನಿರ್ವಹಿಸುತ್ತಿದ್ದು, ದೇಶದಲ್ಲಿ ಸ್ಯಾಮ್ಸಂಗ್ ನಂತರ ಅತಿದೊಡ್ಡ ಸ್ಮಾರ್ಟ್ಫೋನ್ ಬ್ರಾಂಡ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News