×
Ad

ಏರ್ ಇಂಡಿಯಾ ವಿಮಾನದ ಇಂಧನ ಸ್ವಿಚ್ ಗಳನ್ನು ಪೈಲಟ್ ಗಳು ಕಟ್ ಆಫ್ ಮಾಡಿದ್ದಾರೆ: ಕ್ಯಾಪ್ಟನ್ ಸ್ಟೀವ್

Update: 2025-07-12 21:46 IST

Photo: Captain Steeeve/YouTube

ಹೊಸದಿಲ್ಲಿ: “ಏರ್ ಇಂಡಿಯಾ ವಿಮಾನದಲ್ಲಿ ಯಾವುದೇ ತೊಂದರೆ ಇರಲಿಲ್ಲ. ವಿಮಾನದ ಎರಡೂ ಇಂಧನ ಸ್ವಿಚ್ ಗಳನ್ನು ಪೈಲಟ್ ಗಳು ಕಟ್ ಆಫ್ ಮಾಡಿದ್ದಾರೆ” ಎಂದು ಯೂಟ್ಯೂಬರ್ ಕ್ಯಾಪ್ಟನ್ ಸ್ಟೀವ್ ಅಭಿಪ್ರಾಯ ಪಟ್ಟಿದ್ದಾರೆ. ಇಂತಹುದೇ ಅಭಿಪ್ರಾಯವನ್ನು ವಿಮಾನ ಅಪಘಾತ ತನಿಖಾ ದಳ ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ವರದಿಯಲ್ಲೂ ವ್ಯಕ್ತಪಡಿಸಲಾಗಿದ್ದು, ಈ ವರದಿಯನ್ನು ಭಾರತೀಯ ವಿಮಾನ ಪೈಲಟ್ ಗಳ ಸಂಘಟನೆ ಸಾರಾಸಗಟಾಗಿ ತಳ್ಳಿ ಹಾಕಿದೆ.

260 ಮಂದಿಯನ್ನು ಬಲಿ ಪಡೆದ ಜೂನ್ 12ರಂದು ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಕುರಿತು ತನಿಖೆ ಪ್ರಗತಿಯಲ್ಲಿದ್ದು, ಈ ಸಂಬಂಧ, ವಿಮಾನ ಅಪಘಾತ ತನಿಖಾ ದಳವು ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಕೆ ಮಾಡಿದೆ. ಈ ವರದಿಯ ಪ್ರಕಾರ, ವಿಮಾ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಎರಡೂ ಇಂಧನ ಸ್ವಿಚ್ ಗಳನ್ನು ಕಟ್ ಆಫ್ ಮಾಡಲಾಗಿತ್ತು ಎಂದು ಹೇಳಲಾಗಿದೆ. ಹೀಗಾಗಿ, ವಿಮಾನದ ಎರಡೂ ಇಂಜಿನ್ ಗಳು ವಿಫಲಗೊಂಡಿದ್ದವು ಎಂಬುದನ್ನು ವರದಿಯ ಈ ಅಭಿಪ್ರಾಯ ಪುಷ್ಟೀಕರಿಸುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಯೂಟ್ಯೂಬರ್ ಕ್ಯಾಪ್ಟನ್ ಸ್ಟೀವ್, “ಈ ವರದಿಯು ಸ್ತಂಭೀಭೂತಗೊಳಿಸುವಂತಿದೆ” ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ವಿಮಾನದ ಎರಡೂ ಇಂಜಿನ್ ಗಳು ವಿಫಲಗೊಂಡಿದ್ದವು ಎಂಬ ಈ ವರದಿಯ ಅಭಿಪ್ರಾಯವನ್ನು ಇದು ಪುಷ್ಟೀಕರಿಸುತ್ತಿದೆ. ಎರಡೂ ಸ್ವಿಚ್ ಗಳ ಕಟ್ ಆಫ್ ಪ್ರಕ್ರಿಯೆ ಮೂರು ಹಂತಗಳನ್ನು ಒಳಗೊಂಡಿದ್ದು, ಅವನ್ನು ಕಟ್ ಆಫ್ ಮಾಡುವುದು ಲೋಪವೇನಲ್ಲ ಎಂದೂ ಅವರು ತಿಳಿಸಿದ್ದಾರೆ.

ವಿಮಾನ ಅಪಘಾತ ತನಿಖಾ ದಳ ಸಲ್ಲಿಸಿರುವ 15 ಪುಟಗಳ ವರದಿಯ ಅಧ್ಯಯನ ನಡೆಸಿದ ನಂತರ, ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಾಮಾನ್ಯ ಸನ್ನಿವೇಶಗಳಲ್ಲಿ, ವಿಮಾನವು ಆಕಾಶದಲ್ಲಿ ಹಾರಾಟ ನಡೆಸುವಾಗ, ಯಾವುದೇ ಪೈಲಟ್ ಇಂಧನ ಸ್ವಿಚ್ ಅನ್ನು ಕಟ್ ಆಫ್ ಮಾಡುವುದಿಲ್ಲ. ಒಂದು ವೇಳೆ ವಿಮಾನದ ಎರಡೂ ಇಂಜಿನ್ ಗಳೇನಾದರೂ ವಿಫಲಗೊಂಡರೆ, ಆಕಾಶದಲ್ಲಿ ವಿಮಾನವು ಕನಿಷ್ಠ ಪಕ್ಷ 400 ಅಡಿ ಎತ್ತರದಲ್ಲಿ ಹಾರಾಟ ನಡೆಸುವವರೆಗೂ ಏನನ್ನೂ ಸ್ಪರ್ಶಿಸದಂತೆ ಪೈಲಟ್ ಗಳಿಗೆ ತರಬೇತಿ ನೀಡಲಾಗಿರುತ್ತದೆ ಎಂದೂ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಪೈಲಟ್ ಇಂಧನ ಸ್ವಿಚ್ ಗಳನ್ನು ಕಟ್ ಆಫ್ ಮಾಡಿರಬಹುದಾದ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿರುವ ಕ್ಯಾಪ್ಟನ್ ಸ್ಟೀವ್, “ಇದೆಲ್ಲ ಸಾಧ್ಯತೆಯಾಗಿರಬಹುದು, ಆದರೆ, ಇದು ಪೈಲಟ್ ಗಳ ತರಬೇತಿಯ ಭಾಗವಾಗಿರುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪೈಲಟ್ ಗಳು ಎರಡೂ ಇಂಧನ ಸ್ವಿಚ್ ಗಳನ್ನು ಕಟ್ ಆಫ್ ಮಾಡಿರುವ ಸಾಧ್ಯತೆ ಕೇವಲ ಅವಳಿ ಇಂಜಿನ್ ಗಳು ವಿಫಲಗೊಂಡಿದ್ದಾಗ ಮಾತ್ರ ಆಗಿರುತ್ತದೆ. ಹೀಗಿದ್ದೂ, ಪೈಲಟ್ ಗಳು ಎರಡೂ ಸ್ವಿಚ್ ಗಳನ್ನು ಕಟ್ ಆಫ್ ಸ್ಥಿತಿಯಲ್ಲಿಟ್ಟಿರಬೇಕು ಹಾಗೂ ನಂತರ ಹಾರಾಟದ ಸ್ಥಿತಿಗೆ ಮರಳಬೇಕು. ಇದು ಸಂಪೂರ್ಣ ವಿಧಾನವಾಗಿದೆ. ನೀವು ಅದನ್ನು ಸುಮ್ಮನೆ ಕಟ್ ಆಫ್ ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ ಇಂಧನ ಸ್ವಿಚ್ ಗಳು ತಿರುಗಲು ಪ್ರಾರಂಭಿಸಿದ ನಂತರ ಎಂದೂ ಕ್ಯಾಪ್ಟನ್ ಸ್ಟೀವ್ ಹೇಳಿದ್ದಾರೆ.

ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ RAT (Ram Air Turbine) ಅನ್ನು ಚಾಲನೆ ಮಾಡಿರುವುದು ಕಣ್ಣಿಗೆ ಕಾಣುತ್ತಿದೆ. ಆದರೆ, ವಿಮಾನ ವಾಯು ಮಾರ್ಗದಲ್ಲಿದ್ದು, ಇಂಧನ ಸ್ವಿಚ್ ಗಳು ಕಟ್ ಆಫ್ ಸ್ಥಿತಿಯಲ್ಲಿದ್ದಾಗ ಮಾತ್ರ ಅದನ್ನು ಚಾಲನೆ ಮಾಡಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಆದರೆ, ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣವೇನು ಎಂದು ನಿಖರವಾಗಿ ಏನನ್ನೂ ಹೇಳದ ಕ್ಯಾಪ್ಟನ್ ಸ್ಟೀವ್, “ಇಬ್ಬರು ಪೈಲಟ್ ಗಳ ಪೈಕಿ ಓರ್ವ ಪೈಲಟ್ ಯಾವುದೋ ವೈಯಕ್ತಿಕ ಬಿಕ್ಕಟ್ಟಿನಲ್ಲಿದ್ದಂತೆ ತೋರುತ್ತಿದೆ. ವಿಮಾನ ಹೇಗೆ ಕಾರ್ಯಾಚರಿಸಬೇಕಿತ್ತೊ, ಹಾಗೆಯೇ ಕಾರ್ಯಾಚರಣೆ ನಡೆಸಿದೆ. ಆದರೆ, ಎರಡೂ ಇಂಧನ ಸ್ವಿಚ್ ಗಳನ್ನು ಓರ್ವ ವ್ಯಕ್ತಿ ಕಟ್ ಆಫ್ ಮಾಡಿದ್ದಾನೆ” ಎಂದು ತಮ್ಮ ವಿಡಿಯೊದ ಕೊನೆಯಲ್ಲಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News