×
Ad

ದೇವಾಲಯದ ಮೇಲ್ಛಾವಣಿ ಕುಸಿದು ಬಾಲಕಿ ಮೃತ್ಯು, 8 ಮಂದಿಗೆ ಗಾಯ

Girl dies, 8 injured in temple roof collapse

Update: 2023-08-07 22:01 IST

ಲಕ್ನೋ: ಉತ್ತರಪ್ರದೇಶದ ಜೌನ್ಪುರ ಜಿಲ್ಲೆಯ ಶಾಹಗಂಜ್ನಲ್ಲಿ ಸೋಮವಾರ ದೇವಾಲಯದ ಭಾಗವೊಂದು ಕುಸಿದು ಬಿದ್ದು 17 ವರ್ಷದ ಬಾಲಕಿ ಮೃತಪಟ್ಟಿದ್ದು ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಭಕ್ತರು ಹಾಗೂ ಕನ್ವರಿಯಾ ಯಾತ್ರಿಕರಿಗೆ ಪ್ರಸಾದ ವಿತರಿಸುತ್ತಿದ್ದ ಸಂದರ್ಭ ದೇವಾಲಯದ ಜಗಲಿಯ ಮೇಲ್ಛಾವಣಿ ಕುಸಿದು ದುರಂತ ಸಂಭವಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 8 ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಭಗ್ನಾವಶೇಷಗಳಡಿ ಸಿಲುಕಿಕೊಂಡಿದ್ದ ಹಲವಾರು ಮಂದಿಯನ್ನು ರಕ್ಷಿಸಲಾಗಿದೆ ಹಾಗೂ ಅವರನ್ನು ನಗರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೂರಜ್ ಕುಮಾರ್ ರಾಯ್ ತಿಳಿಸಿದ್ದಾರೆ.

ದುರಂತದಲ್ಲಿ 17 ವರ್ಷ ವಯಸ್ಸಿನ ಬಾಲಕಿ ಮೃತದೇಹ ಭಗ್ನಾವಶೇಷಗಳ ನಡುವೆ ಪತ್ತೆಯಾಗಿದೆ. ಇತರ ಎಂಟು ಮಂದಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಜರ್ಝರಿತವಾಗಿರುವ ದೇವಾಲಯದ ಜಗಲಿಯು ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇನ್ನಷ್ಟು ಶಿಥಿಲವಾಗಿದೆ ಎಂದು ಸೂರಜ್ ಕುಮಾರ್ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News