×
Ad

ಸತತ ಕುಸಿತದ ಹಾದಿಯಲ್ಲಿರುವ ಚಿನ್ನ-ಬೆಳ್ಳಿ; ಇಂದಿನ ದರವೆಷ್ಟು?

Update: 2026-02-03 11:31 IST

ಸಾಂದರ್ಭಿಕ ಚಿತ್ರ (AI)

ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಫೋನ್ ಸಂಭಾಷಣೆ ನಡೆಸಿದ ನಂತರ ಅಮೆರಿಕ ಸುಂಕವನ್ನು ಶೇ 18ಕ್ಕೆ ಇಳಿದಿದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ.

ಇಂದು ಮಂಗಳವಾರ ಫೆಬ್ರವರಿ 3ರಂದು ಬಂಗಾರ ಸ್ವಲ್ಪ ಮಟ್ಟಿಗೆ ಕುಸಿದಿದೆ. ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ನಂತರ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಫೋನ್ ಸಂಭಾಷಣೆ ನಡೆಸಿದ ನಂತರ ಅಮೆರಿಕ ಸುಂಕವನ್ನು ಶೇ 18ಕ್ಕೆ ಇಳಿದಿದೆ. ಹೀಗಾಗಿ ಬಂಗಾರದ ಬೆಲೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ.

ಜನವರಿ 29ರಂದು ಗುರುವಾರ 22 ಕ್ಯಾರೆಟ್ ನ ಪ್ರತಿ ಗ್ರಾಂ ಚಿನ್ನ 17,885 ರೂ.ಗೆ ಏರಿತ್ತು. ಆದರೆ ನಂತರ ಸತತ ಕುಸಿಯುತ್ತಾ ಬಂದು ಇದೀಗ 15,175 ರೂ.ಗೆ ಬಂದು ನಿಂತಿದೆ. ಅಮೆರಿಕದ ಡಾಲರ್, ಯುದ್ಧ, ಭೌಗೋಳಿಕ ರಾಜಕೀಯಗಳು ಹಾಗೂ ಸುಂಕದ ರಾಜಕೀಯ ಚಿನ್ನದ ಬೆಲೆಯಲ್ಲಿ ಬದಲಾವಣೆ ತರುತ್ತಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಮಂಗಳವಾರ (ಫೆಬ್ರವರಿ 03) ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,175 (-142) ರೂ. ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,381 (-107) ರೂ. ಬೆಲೆಗೆ ತಲುಪಿದೆ.

ಬೆಳ್ಳಿಯ ಬೆಲೆಯಲ್ಲೂ ಕುಸಿತ

ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಬೆಳ್ಳಿಯ ಬೆಲೆ ಇನ್ನಷ್ಟು ಕುಸಿತ ಕಂಡಿದೆ. ಇಂದು ಗ್ರಾಂಗೆ 20 ರೂ.ನಷ್ಟು ಕುಸಿದ ಬೆಳ್ಳಿ ಕೆಜಿಗೆ 2,80,000 ಲಕ್ಷ ರೂ. ತಲುಪಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,180 (-142) ರೂ., 22 ಕ್ಯಾರೆಟ್ ಚಿನ್ನದ ದರ 13,915 (-130) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,306 (+88) ರೂ., 22 ಕ್ಯಾರೆಟ್ ಚಿನ್ನದ ದರ 14,030 (+ 80) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,175 (-142) ರೂ., 22 ಕ್ಯಾರೆಟ್ ಚಿನ್ನದ ದರ 13,910 (-130) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ.

ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,180 (-142) ರೂ., 22 ಕ್ಯಾರೆಟ್ ಚಿನ್ನದ ದರ 13,915 (-130) ರೂ.

ಲಖನೌ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,190 (-142) ರೂ., 22 ಕ್ಯಾರೆಟ್ ಚಿನ್ನದ ದರ 13,925 (-130) ರೂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News