×
Ad

ಭುವನೇಶ್ವರ: ಹಳಿ ತಪ್ಪಿದ ಗೂಡ್ಸ್ ರೈಲು

Update: 2024-07-29 11:34 IST

ಸಾಂದರ್ಭಿಕ ಚಿತ್ರ 

ಭುವನೇಶ್ವರ: ಸೋಮವಾರ ಮುಂಜಾನೆ ಗೂಡ್ಸ್ ರೈಲೊಂದು ಭುವನೇಶ್ವರದಲ್ಲಿ ಹಳಿ ತಪ್ಪಿದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.

ಈ ಘಟನೆಯು ಮುಂಜಾನೆ 1.35ರ ವೇಳೆಗೆ ಮಂಚೇಶ್ವರ್ ನಿಲ್ದಾಣದ ರೈಲ್ವೆ ಯಾರ್ಡ್ ನಲ್ಲಿ ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಯಾವುದೇ ಜೀವ ಹಾನಿ ಅಥವಾ ನಷ್ಟ ಉಂಟಾಗಿಲ್ಲ ಎಂದೂ ಹೇಳಲಾಗಿದೆ.

ರೈಲು ಹಳಿ ತಪ್ಪಿದ್ದರಿಂದ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ ಆರು ರೈಲುಗಳ ವೇಳಾಪಟ್ಟಿಯನ್ನು ಮರುನಿಗದಿಗೊಳಿಸಲಾಗಿದೆ. ಇದಲ್ಲದೆ ಪುರಿ-ರೂರ್ಕೆಲಾ ಎಕ್ಸ್ ಪ್ರೆಸ್ ರೈಲನ್ನು ಎರಡು ದಿಕ್ಕಿನಿಂದಲೂ ಕೆಲ ಕಾಲ ರದ್ದುಗೊಳಿಸಲಾಗಿತ್ತು ಎನ್ನಲಾಗಿದೆ.

ಮುಂಜಾನೆ 5.05 ಗಂಟೆಗೆ ಈ ಮಾರ್ಗವು ರೈಲು ಸಂಚಾರಕ್ಕೆ ಮುಕ್ತವಾಯಿತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News