×
Ad

ಅಸಾರಾಂ ನ ತಾತ್ಕಾಲಿಕ ಜಾಮೀನನ್ನು ಆ. 21ರವರೆಗೆ ವಿಸ್ತರಿಸಿದ ಗುಜರಾತ್ ಹೈಕೋರ್ಟ್

Update: 2025-08-08 00:06 IST

Photo Credit: PTI

ಅಹಮದಾಬಾದ್: 2013ರ ಅತ್ಯಾಚಾರ ಪ್ರಕರಣವೊಂದರಲ್ಲಿ ಗಾಂಧಿನಗರ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಘೋಷಿತ ದೇವಮಾನವ ಅಸಾರಾಂಗೆ ಮಂಜೂರು ಮಾಡಿದ್ದ ತಾತ್ಕಾಲಿಕ ಜಾಮೀನನ್ನು ಗುರುವಾರ ಗುಜರಾತ್ ಹೈಕೋರ್ಟ್ ಆಗಸ್ಟ್ 21ರವರೆಗೆ ವಿಸ್ತರಿಸಿದೆ.

ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಅಸಾರಾಂ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವೈದ್ಯಕೀಯ ನೆಲೆಯ ಆಧಾರದಲ್ಲಿ ನ್ಯಾ. ಐಲೇಶ್ ವೋರಾ ಮತ್ತು ನ್ಯಾ. ಪಿ.ಎಂ.ರಾವಲ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಅಸಾರಾಂನ ಜಾಮೀನನ್ನು ಆಗಸ್ಟ್ 21ರವರೆಗೆ ವಿಸ್ತರಿಸಿದೆ.

ಅಸಾರಾಂಗೆ ಮೂರನೆಯ ಬಾರಿ ತಾತ್ಕಾಲಿಕ ಜಾಮೀನು ಮಂಜೂರು ಮಾಡುವುದಕ್ಕೂ ಮುನ್ನ, ಜುಲೈ 30ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ್ದ ಗುಜರಾತ್ ಹೈಕೋರ್ಟ್, ತಾತ್ಕಾಲಿಕ ಜಾಮೀನಿನ ವಿಸ್ತರಣೆ ಬೇಕಿದ್ದರೆ, ಮುಖ್ಯವಾಗಿ ಆರೋಗ್ಯ ಕ್ಷೀಣಿಸುತ್ತಿರುವ ನೆಲೆಯಲ್ಲಿ ಹೈಕೋರ್ಟ್ ನ ಬಾಗಿಲು ತಟ್ಟಬಹುದು ಎಂದು ರಿಯಾಯಿತಿ ನೀಡಿತ್ತು.

ಇದಕ್ಕೂ ಮುನ್ನ, ಜುಲೈ 7ರವರೆಗೆ ಅಸಾರಾಂಗೆ ಮಧ್ಯಂತರ ಜಾಮೀನು ವಿಸ್ತರಿಸಿದ್ದ ಗುಜರಾತ್ ಹೈಕೋರ್ಟ್, ಬಳಿಕ ಮತ್ತೊಂದು ತಿಂಗಳ ಅವಧಿಗೂ ಜಾಮೀನು ವಿಸ್ತರಣೆ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News