×
Ad

ತ್ರಿರಾಷ್ಟ್ರ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ

Update: 2025-12-15 22:45 IST

credit : PTI

ಹೊಸದಿಲ್ಲಿ,ಡಿ.15: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಜೋರ್ಡಾನ್, ಇಥಿಯೋಪಿಯಾ ಮತ್ತು ಒಮಾನ್‌ಗೆ ತ್ರಿರಾಷ್ಟ್ರ ಪ್ರಯಾಣವನ್ನು ಕೈಗೊಂಡಿದ್ದಾರೆ. ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಪ್ರಮುಖ ಪಾಲುದಾರರೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವುದು ಈ ಭೇಟಿಯ ಉದ್ದೇಶವಾಗಿದೆ.

ತನ್ನ ಭೇಟಿಯು ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ರಾಜಕೀಯ, ಆರ್ಥಿಕ ಮತ್ತು ಜನರ ನಡುವಿನ ಸಂಬಂಧಗಳನ್ನು ಬಲಗೊಳಿಸುವುದರ ಮೇಲೆ ಕೇಂದ್ರೀಕರಿಸಲಿದೆ ಎಂದು ನಿರ್ಗಮನಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ ಮೋದಿ ತಿಳಿಸಿದರು.

ಮೊದಲು ಜೋರ್ಡಾನ್‌ ಗೆ ಭೇಟಿ ನೀಡಲಿರುವ ಮೋದಿ ಬಳಿಕ ಇಥಿಯೋಪಿಯಾಕ್ಕೆ ತೆರಳಲಿದ್ದಾರೆ. ಇದು ಈ ಆಫ್ರಿಕನ್ ದೇಶಕ್ಕೆ ಮೋದಿಯವರ ಮೊದಲ ಭೇಟಿಯಾಗಲಿದೆ. ಈ ವೇಳೆ ಅವರು ಇಥಿಯೋಪಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರವಾಸದ ಅಂತಿಮ ಹಂತದಲ್ಲಿ ಮೋದಿ ಒಮಾನ್‌ ಗೆ ಭೇಟಿ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News