×
Ad

ಲೋಕಸಭಾ ಚುನಾವಣೆ: ಮೆಹ್ಸಾನ ಕ್ಷೇತ್ರದ ಅಭ್ಯರ್ಥಿತನದಿಂದ ಹಿಂದೆ ಸರಿದ ಗುಜರಾತ್‌ನ ಮಾಜಿ ಡಿಸಿಎಂ ನಿತಿನ್‌ ಪಟೇಲ್‌

Update: 2024-03-04 16:40 IST

ನಿತಿನ್‌ ಪಟೇಲ್‌ (PTI)

ಅಹ್ಮದಾಬಾದ್:‌ ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ನಿತಿನ್‌ ಪಟೇಲ್‌ ತಾನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೆಹ್ಸಾನ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ ನಂತರ ಅವರ ನಿರ್ಧಾರ ಹೊರಬಿದ್ದಿದೆ. ಗುಜರಾತ್‌ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿದ್ದು ಪಟ್ಟಿಯಲ್ಲಿ ರಾಜ್ಯದ 15 ಅಭ್ಯರ್ಥಿಗಳ ಹೆಸರುಗಳಿವೆ.

ಎಕ್ಸ್‌ ಪೋಸ್ಟ್‌ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ ಪಟೇಲ್‌, ಅದೇ ಸಮಯ ಮೆಹ್ಸಾನ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.

“ನರೇಂದ್ರಭಾಯಿ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಜಗತ್ತಿನಾದ್ಯಂತ ಭಾರತದ ಘನತೆಯನ್ನು ಹೆಚ್ಚಿಸಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

ಪಟೇಲ್‌ ಅವರು ಆಗಸ್ಟ್‌ 2016ರಿಂದ ಸೆಪ್ಟೆಂಬರ್‌ 2021ವರೆಗೆ ವಿಜಯ್‌ ರೂಪಾನಿ ಮುಖ್ಯಮಂತ್ರಿಯಾಗಿದ್ದ ವೇಳೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News