×
Ad

ಹರ್ಯಾಣ ಹಿಂಸಾಚಾರ: 393 ಜನರ ಬಂಧನ, ಇಂಟರ್ ನೆಟ್ ಸೇವೆ ನಿಷೇಧ ವಿಸ್ತರಣೆ

Update: 2023-08-12 10:27 IST

Photo: Twitter@NDTV

ಚಂಡೀಗಢ: ಪರಿಸ್ಥಿತಿಗಳು "ಇನ್ನೂ ಕ್ಲಿಷ್ಟಕರ ಹಾಗೂ ಉದ್ವಿಗ್ನ"ವಾಗಿರುವ ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್ನೆಟ್ ಹಾಗೂ ಎಸ್ ಎಂಎಸ್ ಸೇವೆಗಳ ಮೇಲಿನ ನಿಷೇಧವನ್ನು ಹರ್ಯಾಣ ಸರಕಾರ ಶುಕ್ರವಾರದವರೆಗೆ ವಿಸ್ತರಿಸಿದೆ.

ಈ ತಿಂಗಳ ಆರಂಭದಲ್ಲಿ ಹರ್ಯಾಣದಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಒಟ್ಟು 393 ಜನರನ್ನು ಬಂಧಿಸಲಾಗಿದೆ ಹಾಗೂ 118 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಅಲ್ಲದೆ, ನುಹ್, ಗುರುಗ್ರಾಮ್, ಫರಿದಾಬಾದ್, ಪಲ್ವಾಲ್, ರೆವಾರಿ, ಪಾಣಿಪತ್, ಭಿವಾನಿ ಹಾಗೂ ಹಿಸಾರ್ ನಲ್ಲಿ 160 ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬ್ರಜ್ ಮಂಡಲ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 59 ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ ಹಾಗೂ 218 ಜನರನ್ನು ಬಂಧಿಸಲಾಗಿದೆ ಎಂದು ನುಹ್ ಪೊಲೀಸ್ ವರಿಷ್ಠಾಧಿಕಾರಿ ನರೇಂದರ್ ಬಿಜಾರ್ನಿಯಾ ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ನಿಲ್ಲಿಸಲು ಯತ್ನಿಸಿದ ನಂತರ ನೂಹ್ ನಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. 

ನುಹ್ ನಲ್ಲಿ ನಡೆದ ಹಿಂಸಾಚಾರವು ರಾಜ್ಯದಲ್ಲಿ ಬಿಜೆಪಿ-ಜೆಜೆಪಿ ಸರಕಾರದ ಯ ವೈಫಲ್ಯವೇ ಪರಿಣಾಮ ಎಂದು ಹರ್ಯಾಣದ ವಿರೋಧ ಪಕ್ಷಗಳು ಆರೋಪಿಸಿವೆ.

ಏತನ್ಮಧ್ಯೆ, ಗುರುಗ್ರಾಮ್ ಆಡಳಿತವು ಶುಕ್ರವಾರದಿಂದ ಜಿಲ್ಲೆಯ ಎಲ್ಲಾ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಿದೆ. ಶನಿವಾರ ಜಿಲ್ಲೆಯಲ್ಲಿ 11 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲು ನಿರ್ಧರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News