×
Ad

ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಹೇಮಂತ್ ಸೊರೇನ್

Update: 2024-07-08 13:49 IST

ಹೇಮಂತ್ ಸೊರೇನ್ (Photo: PTI)

ರಾಂಚಿ: ಸೋಮವಾರ ಜಾರ್ಖಂಡ್ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಗೆಲುವು ದಾಖಲಿಸಿದ್ದಾರೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಅವರ ಪರ 45 ಶಾಸಕರು ಬೆಂಬಲ ಸೂಚಿಸಿದರು.

ಭೂಹಗರಣ ಪ್ರಕರಣದಲ್ಲಿ ಜಾಮೀನು ದೊರೆತ ನಂತರ, ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಹೇಮಂತ್ ಸೊರೇನ್, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದರು. ಈ ಸಂದರ್ಭದಲ್ಲಿ ಆಡಳಿತಾರೂಢ ಮೈತ್ರಿಕೂಟದ ಜೆಎಂಎಂನ 27, ಕಾಂಗ್ರೆಸ್ ಪಕ್ಷದ 17, ಆರ್‌ಜೆಡಿಯ ಓರ್ವ ಶಾಸಕ ಹೇಮಂತ್ ಸೊರೇನ್ ಪರವಾಗಿ ಮತ ಚಲಾಯಿಸಿದರು. ಇದರಿಂದ 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಹೇಮಂತ್ ಸೊರೇನ್ 45 ಶಾಸಕರ ಬೆಂಬಲವನ್ನು ಪಡೆಯುವ ಮೂಲಕ ವಿಶ್ವಾಸ ಮತ ಸಾಬೀತು ಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News