ಸೈಬರ್ ವಂಚನೆಗಾಗಿ ಮಾನವ ಕಳ್ಳಸಾಗಣೆ : 6 ರಾಜ್ಯಗಳಲ್ಲಿ ಎನ್ಐಎ ಶೋಧ ಕಾರ್ಯಾಚರಣೆ
Update: 2024-11-28 20:16 IST
ಎನ್ಐಎ | PC: National Investigation Agency
ಹೊಸದಿಲ್ಲಿ : ಸೈಬರ್ ವಂಚನೆಗಳಲ್ಲಿ ನಿರತವಾಗಿರುವ ಕಾಲ್ಸೆಂಟರ್ಗಳಲ್ಲಿ ಕೆಲಸ ಮಾಡಲು ಯುವಜನರಿಗೆ ಅಮಿಷವೊಡ್ಡುತ್ತಿರುವ ಮಾನವಕಳ್ಳಸಾಗಣೆ ಜಾಲದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಆರು ರಾಜ್ಯಗಳ 22 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ.
ಬಿಹಾರ, ಉತ್ತರಪ್ರದೇಶ ಹಾಗೂ ದಿಲ್ಲಿಯಲ್ಲೂ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಉದ್ಯೋಗದ ಅಮಿಷವೊಡ್ಡಿ ಭಾರತೀಯ ಯುವಜನರನ್ನು ವಿದೇಶಗಳಿಗೆ ಕರೆದೊಯ್ದು, ಅಲ್ಲಿ ಸೈಬರ್ ವಂಚನೆಯಲ್ಲಿ ತೊಡಗಿರುವ ನಕಲಿ ಕಾಲ್ಸೆಂಟರ್ಗಳಲ್ಲಿ ಅವರನ್ನು ಬಲವಂತವಾಗಿ ಕೆಲಸ ಮಾಡಿಸುತ್ತಿರುವ ಸಂಘಟಿತ ಜಾಲದ ವಿರುದ್ಧ ಬಿಹಾರದ ಗೋಪಾಲ್ಗಂಜ್ನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್ಎಸ್ಎ ಶೋಧ ಕಾರ್ಯಾಚರಣೆಯನ್ನು ನಡೆಸಿತ್ತು.