ದಿಲ್ಲಿಯಲ್ಲಿ ಹದಗೆಟ್ಟ ವಾಯು ಗುಣಮಟ್ಟ | 5ನೇ ತರಗತಿವರೆಗಿನ ಮಕ್ಕಳಿಗೆ ಹೈಬ್ರಿಡ್ ಮಾದರಿಯಲ್ಲಿ ಪಾಠ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ವಿಷಮಿಸಿರುವ ಹಿನ್ನೆಲೆಯಲ್ಲಿ, ಐದನೇ ತರಗತಿವರೆಗಿನ ಮಕ್ಕಳಿಗೆ ಹೈಬ್ರಿಡ್ ಮಾದರಿಯಲ್ಲಿ ತರಗತಿಗಳನ್ನು ನಡೆಸುವಂತೆ ದಿಲ್ಲಿ ಸರಕಾರ ಶಾಲೆಗಳಿಗೆ ಸೂಚನೆ ನೀಡಿದೆ.
ಶಿಕ್ಷಣ ನಿರ್ದೇಶನಾಲಯ ಹೊರಡಿಸಿರುವ ಆದೇಶದಲ್ಲಿ ಶಿಕ್ಷಣ ಇಲಾಖೆ, ಹೊಸದಿಲ್ಲಿ ಮಹಾನಗರ ಪಾಲಿಕೆ, ದಿಲ್ಲಿ ಮಹಾನಗರ ಪಾಲಿಕೆ ಹಾಗೂ ದಿಲ್ಲಿ ಕಂಟೋನ್ಮೆಂಟ್ ಮಂಡಳಿಯಡಿಯ ಸರಕಾರಿ, ಸರಕಾರಿ ಅನುದಾನಿತ, ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಎಲ್ಲ ಮುಖ್ಯಸ್ಥರಿಗೆ ಐದನೆ ತರಗತಿವರೆಗಿನ ಮಕ್ಕಳಿಗೆ ಹೈಬ್ರಿಡ್ ಮಾದರಿಯಲ್ಲಿ ಪಠ್ಯ ಬೋಧಿಸುವಂತೆ ನಿರ್ದೇಶನ ನೀಡಲಾಗಿದೆ.
ಹೈಬ್ರಿಡ್ ಮಾದರಿಯಲ್ಲಿ ಭೌತಿಕ ಮತ್ತು ಆನ್ ಲೈನ್ ತರಗತಿಗಳೆರಡನ್ನೂ ನಡೆಸಲಾಗುತ್ತದೆ. ಸಾಧ್ಯವಿರುವ ತರಗತಿಗಳಿಗೆ ಆನ್ ಲೈನ್ ಬೋಧನೆ ಮಾಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.
ಸೋಮವಾರ ದಿಲ್ಲಿಯಲ್ಲಿನ ವಾಯು ಗುಣಮಟ್ಟ ತೀರಾ ಕಳಪೆ ಮಟ್ಟಕ್ಕೆ ಕುಸಿದಿತ್ತು. ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 425ಕ್ಕೆ ಇಳಿಕೆಯಾಗಿದ್ದು, ಜನರು ಉಸಿರಾಡಲೂ ಕಷ್ಟಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.