×
Ad

ಕಾರ್ಗಿಲ್ ನಲ್ಲಿ ಮೊದಲ ಬಾರಿಗೆ ಮಧ್ಯರಾತ್ರಿ ಯಶಸ್ವಿಯಾಗಿ ಇಳಿದ ಐಎಎಫ್ ವಿಮಾನ

Update: 2024-01-07 22:57 IST

Photo : twitter/IAF_MCC

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆ (ಐಎಎಫ್)ಯ ಸಿ-130 ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನವು ಇತ್ತೀಚಿಗೆ ಮಧ್ಯರಾತ್ರಿಯಲ್ಲಿ ಲಡಾಖ್ನ ಕಾರ್ಗಿಲ್‌ ನಲ್ಲಿ ಪಾಕ್ ಜೊತೆಗಿನ ನಿಯಂತ್ರಣ ರೇಖೆ ಸಮೀಪ ಸುಮಾರು 10,500 ಅಡಿ ಎತ್ತರದಲ್ಲಿರುವ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ ನಲ್ಲಿ ಯಶಸ್ವಿಯಾಗಿ ಇಳಿದಿದೆ.

ಗರುಡ ಕಮಾಂಡೋಗಳನ್ನು ಹೊತ್ತಿದ್ದ ವಿಮಾನವು ರಾತ್ರಿ ವೇಳೆಯಲ್ಲಿ ಕಾರ್ಗಿಲ್‌ ನ ವಾಯುಪಟ್ಟಿಯಲ್ಲಿ ಇಳಿದಿರುವುದು ವ್ಯೆಹಾತ್ಮಕವಾಗಿ ನಿರ್ಣಾಯಕ ವಿಭಾಗದಲ್ಲಿ ಐಎಎಫ್ ನ ಕಾರ್ಯಾಚರಣೆ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ನಿಂದ ವಾಯುಪಡೆಯ ವಿಮಾನಗಳು ಕಾರ್ಯಾಚರಿಸಿವೆಯಾದರೂ ಸಾರಿಗೆ ವಿಮಾನವೊಂದು ಅಲ್ಲಿ ಇಳಿದಿರುವುದು ಇದೇ ಪ್ರಥಮವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News