×
Ad

ಇಸ್ಲಾಮಿಕ್ ವಿಚಾರಗಳ ಪ್ರಚಾರದ ಆರೋಪ; ಬಲಪಂಥೀಯರಿಂದ ಐಐಟಿ ಗಾಂಧಿನಗರದ ವಿರುದ್ಧ ಆಕ್ರೋಶ

Update: 2025-05-05 12:45 IST

Photo credit: news.iitgn.ac.in

ಹೊಸದಿಲ್ಲಿ: ಇಸ್ಲಾಮಿಕ್ ವಿಚಾರಗಳ ಪ್ರಚಾರದ ಆರೋಪದಲ್ಲಿ ಬಲಪಂಥೀಯರು ಐಐಟಿ ಗಾಂಧಿನಗರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು telegraphindia.com ವರದಿ ಮಾಡಿದೆ.

ಸ್ಕೂಲ್ ಆಫ್ ಹ್ಯುಮಾನಿಟಿಸ್ ಆಂಡ್ ಸೋಷಿಯಲ್ ಸೈನ್ಸಸ್(ಎಚ್‌ಎಸ್‌ಎಸ್)ನ ಆಯ್ದ ವಿದ್ಯಾರ್ಥಿಗಳು ಡೆಸರ್ಟೇಷನ್ (ಸಂಶೋಧನೆ) ಗೆ ಆಯ್ದುಕೊಂಡ ವಿಷಯಗಳನ್ನು ಉಲ್ಲೇಖಿಸಿ ಬಲಪಂಥೀಯರು ಕ್ಯಾಂಪಸ್‌ನಲ್ಲಿ "ಇಸ್ಲಾಮೀಕರಣ"ದ ಆರೋಪಗಳನ್ನು ಮಾಡಿದ್ದು, ನಂತರ ಸಂಸ್ಥೆಯು ಎಕ್ಸ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

ವಿದ್ಯಾರ್ಥಿಗಳ, ವಿಶೇಷವಾಗಿ ಹಿಂದೂ ಸಮುದಾಯದವರ - ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಭಾವನೆಗಳಿಗೆ ನೋವಾಗುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಲು ಆರೆಸ್ಸೆಸ್ ನ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ರವಿವಾರ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಎಚ್‌ಎಸ್‌ಎಸ್‌ನ ವಿದ್ಯಾರ್ಥಿಗಳೊಂದಿಗೆ ಅವರ ಡೆಸರ್ಟೇಷನ್(ಸಂಶೋಧನೆ) ಭಾಗವಾಗಿ ಹಂಚಿಕೊಳ್ಳಲಾದ ವಿಷಯಗಳನ್ನು, ಕೋಲಾಹಲವನ್ನು ಉಂಟುಮಾಡಲು ಬೇಕೆಂದೇ "ಆಯ್ದ" ವಿಷಯಗಳನ್ನು ಮಾತ್ರ ಸೋರಿಕೆ ಮಾಡಲಾಗಿದೆ ಎನ್ನಲಾಗಿದೆ.

ಎಪ್ರಿಲ್ 28 ರಂದು, ಎಮಿನೆಂಟ್ ಇಂಟೆಲೆಕ್ಚುವಲ್ ಎಂಬ ಎಕ್ಸ್ ಬಳಕೆದಾರ ಕೆಲವು ಡೆಸರ್ಟೇಷನ್(ಸಂಶೋಧನೆ) ವಿಷಯಗಳನ್ನು ಪಟ್ಟಿ ಮಾಡಿ ಪೋಸ್ಟ್ ಮಾಡಿದ ನಂತರ ಈ ವಿಚಾರ ಮುನ್ನೆಲೆಗೆ ಬಂದಿದೆ. “ಭಾರತವು ಅಂತಿಮವಾಗಿ ತನ್ನದೇ ಆದ AI ಅನ್ನು ಹೊಂದಿದೆ! ಇದು ನಿಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಕೇರಳದ ಶಕ್ತಿಯ ಮೂಲಕ ChatGPT ಮತ್ತು Deepseek ಅನ್ನು ಸೋಲಿಸುವ ಈ ವಿಶಿಷ್ಟ ವಾಸ್ತುಶಿಲ್ಪವನ್ನು IIT ಗಾಂಧಿನಗರವು ತಂದಿದೆ. ಇದನ್ನು Deepfaith ಎಂದು ಕರೆಯಲಾಗುತ್ತದೆ. ತೆರಿಗೆದಾರರ ನಿಧಿಯನ್ನು ನಿಮ್ಮ 'ಸ್ವಾಯತ್ತತೆ'ಗೆ ಬಳಸಿದ್ದಕ್ಕಾಗಿ @iitgn ಗೆ ಧನ್ಯವಾದಗಳು. ಇದು ಈ ದೇಶವನ್ನು ನಮಗೆಲ್ಲರಿಗೂ ಉತ್ತಮ ಸ್ಥಳವನ್ನಾಗಿ ಮಾಡಲು ನಮ್ಮ ಸುಪ್ರೀಂ ಕೋರ್ಟ್‌ ಮಾಡುತ್ತಿರುವುದರಂತೆಯೇ ಕಂಡುಬರುತ್ತಿದೆ.*AI = ಅಯತೊಲ್ಲಾ ಅವರ ಬುದ್ಧಿಶಕ್ತಿ," ಅವರು ಪೋಸ್ಟ್ ಮಾಡಿದ್ದಾರೆ.

ಮುಸ್ಲಿಂ ಪ್ರಾಬಲ್ಯದ ಪ್ರದೇಶದ ಜನರ ಮೀನುಗಾರಿಕೆ ಮತ್ತು ಪರಿಸರ ವಿಜ್ಞಾನ, ಇಸ್ಲಾಮಿಕ್ ಆಚರಣೆಗಳು ಮತ್ತು ಇಸ್ಲಾಮಿಕ್ ಉಡುಪುಗಳ ಬಗ್ಗೆ ಸ್ಥಳೀಯ ವಿಷಯಗಳು ಡೆಸರ್ಟೇಷನ್(ಸಂಶೋಧನೆ)ಗೆ ಆರಿಸಿರುವ ವಿಷಯಗಳಲ್ಲಿ ಸೇರಿವೆ.

"ವಿದ್ಯಾರ್ಥಿಗಳು ಧಾರ್ಮಿಕ ಆಚರಣೆಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಾನವಶಾಸ್ತ್ರೀಯ ಮತ್ತು ಸಾಮಾಜಿಕ ಅಧ್ಯಯನಗಳನ್ನು ಮಾಡುತ್ತಾರೆ. ಸುಮಾರು 20 ವಿದ್ಯಾರ್ಥಿಗಳು ಬ್ರಾಹ್ಮಣ ವ್ಯವಸ್ಥೆ, ವೇದಗಳು ಮತ್ತು ದೇವಾಲಯ ನಿರ್ವಹಣೆಯಂತಹ ಹಿಂದೂ ಸಂಪ್ರದಾಯಗಳನ್ನು ಅಧ್ಯಯನ ಮಾಡಿದ್ದಾರೆ. ಇದರಲ್ಲಿ ನಮ್ಮದು ಯಾವುದೇ ತಪ್ಪಿಲ್ಲ. ಆದರೂ ನಮ್ಮನ್ನು ಗುರಿ ಮಾಡಲಾಗಿತ್ತಿದೆ," ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿಯೊಬ್ಬರು ಹೇಳಿದರು.

ವಿದ್ಯಾರ್ಥಿ ಅಭಿವೃದ್ಧಿ ವಿಭಾಗದ ಅಸೋಸಿಯೇಟ್ ಡೀನ್ ಮನೀಶ್ ಕುಮಾರ್, ಸಂಸ್ಥೆಯ ವಿರುದ್ಧದ ಅಭಿಯಾನವು ಶೈಕ್ಷಣಿಕ ಅರ್ಹತೆಯ ಕೊರತೆಯ ಪರಿಣಾಮ ಎಂದು ಹೇಳಿದರು.

"ಯಾರಾದರೂ ಯಾವುದೇ ಸಂಶೋಧನಾ ವಿಷಯ ಆರಿಸಿಕೊಳ್ಳಬಹುದು. ಸೂಕ್ತ ವಿಧಾನಗಳ ಮೂಲಕ ಪ್ರತಿಕ್ರಿಯೆ ಮತ್ತು ರಚನಾತ್ಮಕ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ. ಈ ರೀತಿಯ ನಡೆ ಸರಿಯಲ್ಲ," ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News