×
Ad

ಭಾರತವು ತಟಸ್ಥವಲ್ಲ, ಅದು ಶಾಂತಿಯ ಪರವಾಗಿದೆ: ಉಕ್ರೇನ್ ಯುದ್ಧ ಕುರಿತು ಪುಟಿನ್‌ಗೆ ಪ್ರಧಾನಿ ಮೋದಿ ಸಂದೇಶ

Update: 2025-12-05 15:43 IST

ಹೊಸದಿಲ್ಲಿ: ಭಾರತವು ತಟಸ್ಥವಾಗಿಲ್ಲ ಮತ್ತು ಅದು ಉಕ್ರೇನ್ ಯುದ್ಧದಲ್ಲಿ ಶಾಂತಿಯ ಪರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದ್ವಿಪಕ್ಷೀಯ ಮಾತುಕತೆ ಸಂದರ್ಭ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ತಿಳಿಸಿದರು. ಈ ವರ್ಷದ ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ ಸಂದರ್ಭದಲ್ಲಿಯೂ ಮೋದಿ ಇದೇ ನಿಲುವನ್ನು ವ್ಯಕ್ತಪಡಿಸಿದ್ದರು.

ಬಹುನಿರೀಕ್ಷಿತ ದ್ವಿಪಕ್ಷೀಯ ಸಭೆಯಲ್ಲಿ ಪುಟಿನ್ ಅವರನ್ನು ‘ದೂರದೃಷ್ಟಿಯ ನಾಯಕ’ ಎಂದು ಪ್ರಶಂಸಿಸಿದ ಮೋದಿ, ಇದು ಶಾಂತಿಯ ಯುಗವಾಗಿದೆ ಎಂದು ಒತ್ತಿ ಹೇಳಿದರು.

‘ಭಾರತವು ತಟಸ್ಥವಾಗಿಲ್ಲ. ಭಾರತವು ಶಾಂತಿಯ ಪರವಾಗಿದೆ. ಇದು ಶಾಂತಿಯ ಯುಗವಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳೊಂದಿಗೆ ಜಗತ್ತು ಮತ್ತೊಮ್ಮೆ ಶಾಂತಿಯ ದಿಕ್ಕಿಗೆ ಮರಳುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ’ ಎಂದು ಹೇಳಿದರು. 

ಕಳೆದ 11 ವರ್ಷಗಳಲ್ಲಿ ಉಭಯ ನಾಯಕರು 19 ಸಲ ಪರಸ್ಪರ ಭೇಟಿಯಾಗಿದ್ದಾರೆ.

ಪಾಶ್ಚಾತ್ಯ ದೇಶಗಳು ರಷ್ಯದ ವಿರುದ್ಧ ಹಲವಾರು ನಿರ್ಬಂಧಗಳನ್ನು ಹೇರುವುದರೊಂದಿಗೆ ಕಳೆದ ನಾಲ್ಕು ವರ್ಷಗಳಿಂದಲೂ ನಡೆಯುತ್ತಿರುವ ಉಕ್ರೇನ್ ಯುದ್ಧವು ಪುಟಿನ್ ಅವರನ್ನು ಒಂದು ರೀತಿಯಲ್ಲಿ ಬಹಿಷ್ಕೃತ ವ್ಯಕ್ತಿಯನ್ನಾಗಿಸಿದೆ. ಉಕ್ರೇನ್ ಮತ್ತು ರಶ್ಯ ನಡುವೆ ಶಾಂತಿ ಒಪ್ಪಂದಕ್ಕಾಗಿ ಟ್ರಂಪ್ ಆಡಳಿತದ ಪ್ರಯತ್ನಗಳ ನಡುವೆಯೇ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News