×
Ad

ಭಾರತ-ಪಾಕಿಸ್ತಾನದ ಸೇನಾಧಿಕಾರಿಗಳು ಹಾಟ್‌ಲೈನ್‌ ನಲ್ಲಿ ಮಾತುಕತೆ; ಕದನ ವಿರಾಮದ ಕುರಿತು ಚರ್ಚೆ

Update: 2025-05-12 21:29 IST

PC : aljazeera.com

ಹೊಸದಿಲ್ಲಿ: ಭಾರತ ಹಾಗೂ ಪಾಕಿಸ್ತಾನಗಳ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು (ಡಿಜಿಎಂಒ) ಸೋಮವಾರ ಹಾಟ್‌ಲೈನ್ ಮೂಲಕ ಮಾತುಕತೆ ನಡೆಸಿದರು.

ಗಡಿಯಾಚೆಗಿನ ಉದ್ವಿಗ್ನತೆ ಕಡಿಮೆ ಮಾಡುವ ಗುರಿಯ ಇತ್ತೀಚೆಗಿನ ಕದನ ವಿರಾಮ ಒಪ್ಪಂದದ ಪ್ರಮುಖ ಅಂಶಗಳ ಕುರಿತು ಅವರು ಚರ್ಚೆ ನಡೆಸಿದರು.

ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಮೇ 10ರ ಕದನ ವಿರಾಮದ ಒಪ್ಪಂದವನ್ನು ಉಭಯ ದೇಶಗಳ ಉನ್ನತ ಸೇನಾಧಿಕಾರಿಗಳು ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಈ ಒಪ್ಪಂದಗಳಲ್ಲಿ ಸೇನಾ ಕಾರ್ಯಾಚರಣೆ ಸ್ಥಗಿತ ಹಾಗೂ ಗಡಿ ನಿಯಂತ್ರಣ ರೇಖೆ, ಇತರ ವಲಯಗಳಲ್ಲಿ ಕದನ ವಿರಾಮ ಉಲ್ಲಂಘನೆಗಳನ್ನು ಒಳಗೊಂಡಿದೆ ಎಂದು ಅವು ತಿಳಿಸಿವೆ.

ಆರಂಭದಲ್ಲಿ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದ ಮಾತುಕತೆ, ಅನಂತರ ಸ್ಪಲ್ಪ ವಿಳಂಬವಾಗಿ ಆರಂಭವಾಯಿತು. ಸಂಜೆ ಸುಮಾರು 5 ಗಂಟೆಗೆ ಅಂತ್ಯಗೊಂಡಿತು. ಈ ಮಾತುಕತೆಯ ಫಲಿತಾಂಶ ಅಥವಾ ದೃಢ ನಿರ್ಧಾರಗಳಿಗೆ ಸಂಬಂಧಿಸಿದ ವಿವರಗಳು ಇದುವರೆಗೆ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News