×
Ad

ಎಸ್ -400 ಡಿಫೆನ್ಸ್‌ ಸಿಸ್ಟಮ್‌, ಸೂರತ್ ವಾಯ ನೆಲೆ ಧ್ವಂಸ ಮಾಡಿದ್ದೇವೆಂಬ ಪಾಕ್ ಹೇಳಿಕೆಯನ್ನು ತಳ್ಳಿ ಹಾಕಿದ ಭಾರತೀಯ ಸೇನೆ

Update: 2025-05-10 13:23 IST

Photo credit: PTI

ಹೊಸದಿಲ್ಲಿ: ಭಾರತದ ಎಸ್-400 ವಾಯು ರಕ್ಷಣಾ ವ್ಯವಸ್ಥೆ ಮತ್ತು ಸೂರತ್‌ ವಾಯು ನೆಲೆಯನ್ನು ನಾಶಪಡಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯು ಸುಳ್ಳು ಎಂದು ಭಾರತ ಹೇಳಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಜೊತೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಪಾಕಿಸ್ತಾನ ನಿರಂತರ ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಹರಡುತ್ತಿದೆ. ಪಾಕಿಸ್ತಾನ ಹರಡುತ್ತಿರುವ ಸುಳ್ಳು ಹೇಳಿಕೆಗಳನ್ನು ಭಾರತ ಸ್ಪಷ್ಟವಾಗಿ ತಿರಸ್ಕರಿಸುತ್ತದೆ ಎಂದು ಹೇಳಿದರು.

ಭಾರತದ S-400 ವ್ಯವಸ್ಥೆ ಮತ್ತು ಸೂರತ್ ಮತ್ತು ಸಿರ್ಸಾದಲ್ಲಿನ ವಾಯುನೆಲೆಗಳನ್ನು ನಾಶಪಡಿಸಿರುವ ಬಗ್ಗೆ ಪಾಕಿಸ್ತಾನ ನಿರಂತರ ದುರುದ್ದೇಶಪೂರಿತ ತಪ್ಪು ಮಾಹಿತಿಯನ್ನು ಹರಡುತ್ತಿದೆ. ಪಾಕಿಸ್ತಾನ ಹರಡುತ್ತಿರುವ ಈ ಸುಳ್ಳು ಹೇಳಿಕೆಗಳನ್ನು ಭಾರತ ನಿಸ್ಸಂದಿಗ್ಧವಾಗಿ ತಿರಸ್ಕರಿಸುತ್ತದೆ ಎಂದು ಹೇಳಿದರು.

ಸಿರ್ಸಾ ಮತ್ತು ಸೂರತ್‌ಗಢ ನೆಲೆಗಳ ಸಮಯ ಮುದ್ರೆ ಹಾಕಿದ ಚಿತ್ರಗಳನ್ನು ತೋರಿಸುವ ಮೂಲಕ ಭಾರತೀಯ ವಾಯುನೆಲೆಗಳಿಗೆ ಹಾನಿ ಮಾಡಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಸುಳ್ಳು ಎಂದು ವ್ಯೋಮಿಕಾ ಸಿಂಗ್ ಹೇಳಿದರು.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ, ಪಾಕಿಸ್ತಾನ ಸುಳ್ಳು ಮತ್ತು ತಪ್ಪು ಸುದ್ದಿಯನ್ನು ಹರಡುತ್ತಿದೆ. ಭಾರತದಲ್ಲಿನ ವಿವಿಧ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿರುವ ಅವರ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News