×
Ad

ಭಾರತೀಯರು ಉತ್ತಮ ಆಡಳಿತದ ರಾಜಕೀಯವನ್ನು ಆಯ್ಕೆ ಮಾಡಿದ್ದಾರೆ: ಪ್ರಧಾನಿ ಮೋದಿ

Update: 2023-12-03 19:39 IST

 ನರೇಂದ್ರ ಮೋದಿ | Photo: ANI 

ಹೊಸದಿಲ್ಲಿ: ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್ಗಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯು ‘ಹ್ಯಾಟ್ರಿಕ್ ’ ವಿಜಯವನ್ನು ಸಾಧಿಸಿರುವ ಹಿನ್ನೆಲೆಯಲ್ಲಿ ರವಿವಾರ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಭಾರತದ ಜನತೆ ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯವನ್ನು ಆಯ್ಕೆ ಮಾಡಿದ್ದಾರೆ ಎನ್ನುವುದನ್ನು ಚುನಾವಣಾ ಫಲಿತಾಂಶಗಳು ಸೂಚಿಸಿವೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡಗಳಲ್ಲಿ ಬಿಜೆಪಿಯು ಬಹುಮತಕ್ಕೆ ಅಗತ್ಯವಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದು,ತನ್ನದೇ ಸ್ವಂತ ಬಲದಲ್ಲಿ ಸರಕಾರಗಳನ್ನು ರಚಿಸಲು ಸಜ್ಜಾಗಿದೆ.

ಎಕ್ಸ್ ಪೋಸ್ಟ್ ನಲ್ಲಿ ಮತದಾರರಿಗೆ ಗೌರವ ಸಲ್ಲಿಸಿರುವ ಮೋದಿ,ಅವರನ್ನು ‘ಜನತಾ ಜನಾರ್ಧನ ’ಎಂದು ಬಣ್ಣಿಸಿದ್ದಾರೆ. ಮತದಾರರ ಬೆಂಬಲಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುವ ಮೋದಿ,ಅವರ ಕಲ್ಯಾಣಕ್ಕಾಗಿ ಬಿಜೆಪಿಯು ಅವಿಶ್ರಾಂತವಾಗಿ ಶ್ರಮಿಸಲಿದೆ ಎಂದು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News