×
Ad

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಇಂಡಿಗೋದಿಂದ ಎಡವಟ್ಟು ; ತಪ್ಪಿದ ಭಾರಿ ಅನಾಹುತ!

Update: 2025-03-09 20:18 IST
PC : X \ @aviationbrk

ಚೆನ್ನೈ: ಇಲ್ಲಿನ ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ ಮುಂಬೈನಿಂದ ಬರುತ್ತಿದ್ದ ಇಂಡಿಗೋ ವಿಮಾನ ಇಳಿಯುವಾಗ ಮಾಡಿದ ಎಡವಟ್ಟಿನಿಂದ ಸಂಭವಿಸಬಹುದಾಗಿದ್ದ ಭಾರಿ ಅವಘಡವೊಂದು, ಅದೃಷ್ಟವಶಾತ್ ತಪ್ಪಿದೆ.

ವಿಮಾನ ಇಳಿಯುವಾಗ ಅದರ ಹಿಂಭಾಗ ಭೂಮಿಗೆ ಘರ್ಷಿಸಿದ್ದು, ವಿಮಾನದ ಭಾಹ್ಯ ರಕ್ಷಾ ಕವಚ ಭಾಹಶಃ ಹಾನಿಯಾಗಿದೆ. ಅದೃಷ್ಟವಶಾತ್ ಸ್ವಲ್ಪ ತಪ್ಪಿದ್ದರೆ ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಂಭವವಿತ್ತು ಎನ್ನಲಾಗಿದೆ.

ಘಟನೆಯ ಕುರಿತು ತಕ್ಷಣವೇ ವಿಮಾನಯಾನ ನಿರ್ದೇಶನಾಲಯ(DGCA)ಗೆ ವರದಿ ಮಾಡಲಾಗಿದ್ದು, ಈ ಬಗ್ಗೆ ವಿಮಾನ ಅಪಘಾತ ತನಿಖಾ ಮಂಡಳಿ (AAIB) ತನಿಖೆ ನಡೆಸುತ್ತಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ, ಮಾ. 8 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಇಂಡಿಗೋ ಏರ್ಬಸ್ A321 ವಿಮಾನದ ಹಿಂಭಾಗವು ಲ್ಯಾಂಡಿಂಗ್ ವೇಳೆ ರನ್ವೇಯನ್ನು ಸ್ಪರ್ಶಿಸಿದೆ ಎಂದು ಹೇಳಲಾಗಿದೆ. ವಿಮಾನವನ್ನು ದುರಸ್ತಿ ಮಾಡಲಾಗುತ್ತಿದ್ದು, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಾವು ಎಲ್ಲಾ ಸುರಕ್ಷತಾ ಮಾನದಂಡಗಳೊಂದಿಗೆ ಕಾರ್ಯ ನಿರ್ವಹಿತ್ತೇವೆ. ನಮ್ಮ ಗ್ರಾಹಕರಿಗೆ ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News