×
Ad

ಫತೇಗಡ ಜೈಲಿನಲ್ಲಿ ಕೈದಿಗಳ ಸಂದರ್ಶಕರ ಕೈಗೆ ಜೈಶ್ರೀರಾಮ್ ಮುದ್ರೆ

Update: 2024-01-23 22:33 IST

 Photo: Twitter/District Jail Fatehgarh

ಫಾರೂಖಾಬಾದ್ : ಉತ್ತರಪ್ರದೇಶದ ಫತೇಗಢ ಕಾರಾಗೃಹದಲ್ಲಿ ಕೈದಿಗಳ ಭೇಟಿಗೆ ಆಗಮಿಸುವ ಸಂದರ್ಶಕರನ್ನು ಗುರುತಿಸಲು  ಅವರ ಕೈಗಳಿಗೆ ಹಚ್ಚಲಾಗುವ ಮಾಮೂಲಿ ಸ್ಟಾಂಪ್ ಮುದ್ರೆಯ ಬದಲಿಗೆ  ಜೈಲಾಧಿಕಾರಿಗಳುಜೈಶ್ರೀರಾಮ್ಎಂದು ಕೆಂಪು ಬಣ್ಣದ ಶಾಯಿಯಿಂದ ಬರೆದಿರುವ ಮುದ್ರೆಯನ್ನು ಒತ್ತುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಕಳೆದ ಒಂದು ವಾರದಿಂದ  ಪದ್ದತಿ ಜಾರಿಗೆ ಬಂದಿದೆಯೆಂದು ಜೈಲು ಅಧೀಕ್ಷಕ ಭೀಮಸೇನ್ ಮುಕುಂದ್ ಅವರು ತಿಳಿಸಿದ್ದಾರೆ.

‘‘ಕೈದಿಗಳ ಪುನರ್ವಸತಿ ಪ್ರಯತ್ನಗಳ ಭಾಗವಾಗಿ ಜೈಲಿನಲ್ಲಿ ರಾಮಯಾಣದ ಸುಂದರಕಾಂಡ ಪಠಣದಂತಹ ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸಲಾಗುತ್ತಿದೆ. ‘ ಒಂದು ಜಿಲ್ಲೆ, ಒಂದು ಉತ್ಪನ್ನಯೋಜನೆಯಡಿ ಬ್ಲಾಕ್ ಪ್ರಿಂಟಿಂಗ್ ತರಬೇತಿಯನ್ನು ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ.

‘‘ಭದ್ರತಾ ಕಾರಣಗಳಿಗಾಗಿ ನಾವು ಸಂದರ್ಶಕರಿಗೆ ಹಚ್ಚುವ ಮುದ್ರೆಯ ವಿನ್ಯಾಸಗಳನ್ನು  ಬದಲಾಯಿಸುತ್ತಲೇ ಇರುತ್ತೇವೆ. ಇಂತಹ ಮುದ್ರೆಗಳನ್ನು  ಬಳಸಿಕೊಂಡಿರುವುದು ಇದು ಮೊದಲ ಸಲವೇನಲ್ಲ. ದೀಪಾವಳಿ ಹಬ್ಬದ ವೇಳೆ   ‘ದೀಪಾವಳಿಯ ಶುಭಾಶಯಕೋರುವ ಮುದ್ರೆಗಳನ್ನು ಕೂಡಾ ನಾವು ಬಳಸಿದ್ದೇವೆ. ಈಗ ಯಾವುದೇ ಕುಟುಂಬ ಸದಸ್ಯ, ಸ್ನೇಹಿತ ಅಥವಾ ಬಂದು ಕೈದಿಯನ್ನು ಭೇಟಿಯಾಗಲು ಬಂದಲ್ಲಿ ಅವರ ಕೈಗೆ  ಜೈ ಶ್ರೀರಾಮ್ ಎಂಬ ಬರಹದ ಮುದ್ರೆಯನ್ನು  ಹಚ್ಚಲಾಗುತ್ತಿದೆ’’ ಎಂದವರು ಹೇಳಿದ್ದಾರೆ.

‘‘ಕಾರಾಗೃಹ ಮುಖ್ಯ ಕಾರ್ಯಾಲಯದ ಆದೇಶದ ಹಿನ್ನೆಲೆಯಲ್ಲಿ ಜನವರಿ 22ರಂದು ಕೈದಿಗಳು  ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿದರು. ಇದಕ್ಕಾಗಿ ಕೈದಿಗಳನ್ನು ಸಂದರ್ಶಕರು ಭೇಟಿಯಾಗುವ  ಸ್ಥಳದಲ್ಲಿ ಬೃಹತ್ ಟಿವಿ ಪರದೆಯೊಂದನ್ನು ಇರಿಸಲಾಗಿತ್ತು. ಜೈಲಿನೊಳಗೆ ಕೈದಿಗಳು ಸುಮಾರು ಒಂದು ವಾರ ಕಾಲ ಸುಂದರ ಕಾಂಡವನ್ನು ಪಠಿಸಲಿದ್ದಾರೆ. ಭಜನೆ , ಕೀರ್ತನೆ, ಪ್ರಸಾರ ವಿತರಣೆ ಹಾಗೂ ಭೋಜನಕೂಟಗಳನ್ನು ಅವಧಿಯಲ್ಲಿ ಹಮ್ಮಿಕೊಳ್ಳಲಾಗಿದೆ’’ ಎಂದು ಮುಕುಂದ್ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News