×
Ad

ಜಮ್ಮುಕಾಶ್ಮೀರ: ನಾಪತ್ತೆಯಾದ ಯೋಧ ಪತ್ತೆ

Update: 2023-08-04 21:22 IST

ರೈಫಲ್‌ಮ್ಯಾನ್ ಜಾವೇದ್ ಅಹ್ಮದ್‌ | Photo: NDTV

ಶ್ರೀನಗರ: ಕುಲ್ಗಾಂವ್‌ನಿಂದ ಕಳೆದ ವಾರ ನಾಪತ್ತೆಯಾಗಿದ್ದ ಸೇನಾ ಯೋಧ ಜಮ್ಮು ಹಾಗೂ ಕಾಶ್ಮೀರದಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಯೋಧ ರೈಫಲ್‌ಮ್ಯಾನ್ ಜಾವೇದ್ ಅಹ್ಮದ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾವೇದ್ ಅಹ್ಮದ್ ಜುಲೈ 29ರಂದು ತನ್ನ ಮನೆಯ ಸಮೀಪದಿಂದ ನಾಪತ್ತೆಯಾಗಿದ್ದರು. ಒಂದು ದಿನದ ಬಳಿಕ ಕರ್ತವ್ಯಕ್ಕೆ ಮರಳಲಿರುವುದರಿಂದ ಕೆಲವು ಆಹಾರ ಸಾಮಗ್ರಿಗಳನ್ನು ಖರೀದಿಸಿಲು ಅವರು ಮನೆಯಿಂದ ಹೊರಗೆ ಹೋಗಿದ್ದರು. ಅನಂತರ ಮಾರುಕಟ್ಟೆ ಪ್ರದೇಶದಲ್ಲಿ ಅವರ ಕಾರು ಪತ್ತೆಯಾಗಿತ್ತು.

ಜಮ್ಮು ಹಾಗೂ ಕಾಶ್ಮೀರ ಲೈಟ್ ಇನ್‌ಫೆಂಟ್ರಿಯ ರೈಫಲ್‌ಮ್ಯಾನ್ ಆಗಿರುವ ಜಾವೇದ್ ಅಹ್ಮದ್ ಅವರನ್ನು ಲಡಾಖ್‌ಗೆ ನಿಯೋಜಿಸಲಾಗಿತ್ತು. ಅವರು ಕಳೆದ ತಿಂಗಳು ಈದ್‌ಗೆ ರಜೆ ಪಡೆದುಕೊಂಡಿದ್ದರು.

ಅಹ್ಮದ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

ತನ್ನ ಪುತ್ರನನ್ನು ಉಗ್ರರು ಅಪಹರಿಸಿದ್ದಾರೆ ಎಂದು ಆಂತಕಗೊಂಡಿರುವ ಅಹ್ಮದ್ ಅವರ ತಾಯಿ, ಪುತ್ರ ಸುರಕ್ಷಿತವಾಗಿ ಮನೆಗೆ ಮರಳುವಂತೆ ಆಗ್ರಹಿಸಿ ವೀಡಿಯೊ ಸಂದೇಶ ಪೋಸ್ಟ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News