×
Ad

ಜಮ್ಮು | ಏಳು ಭಯೋತ್ಪಾದಕರನ್ನು ಹತ್ಯೆಗೈದ ಬಿಎಸ್‌ಎಫ್

Update: 2025-05-09 15:41 IST

PC : NDTV 

ಹೊಸದಿಲ್ಲಿ/ಜಮ್ಮು: ಜಮ್ಮು ಬಳಿಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಏಳು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದ್ದು, ಒಂದು ರೇಂಜರ್ಸ್ ಪೋಸ್ಟ್ ಅನ್ನೂ ನಾಶಗೊಳಿಸಲಾಗಿದೆ ಎಂದು ಶುಕ್ರವಾರ ಗಡಿ ಭದ್ರತಾ ಪಡೆ ತಿಳಿಸಿದೆ.

ಗುರುವಾರ ತಡರಾತ್ರಿ ಸಾಂಬಾ ಸೆಕ್ಟರ್‌ನಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ಚಲನವಲನವನ್ನು ಗಮನಿಸಿ ಸೇನೆಯು ಕಾರ್ಯಾಚರಣೆ ನಡೆಸಿದೆ.

ಈ ಒಳ ನುಸುಳುವಿಕೆಗೆ ದಂಧಾರ್‌ನಲ್ಲಿರುವ ಪಾಕಿಸ್ತಾನದ ರೇಂಜರ್ಸ್ ಪೋಸ್ಟ್ ಗುಂಡಿನ ದಾಳಿ ನಡೆಸುವ ಮೂಲಕ ನೆರವು ಒದಗಿಸಿತ್ತು ಎಂದು ಗಡಿ ಭದ್ರತಾ ಪಡೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಒಳ ನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದ್ದು, ಈ ವೇಳೆ ಏಳು ಮಂದಿ ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ. ಅಲ್ಲದೆ, ಪಾಕಿಸ್ತಾನದ ಧಂಧಾರ್ ರೇಂಜರ್ಸ್ ಪೋಸ್ಟ್ ಗೆ ತೀವ್ರ ಹಾನಿಯನ್ನೂ ಮಾಡಲಾಗಿದೆ. ಈ ಹಾನಿಗೊಳಗಾಗಿರುವ ರೇಂಜರ್ಸ್ ಪೋಸ್ಟ್‌ನ ಥರ್ಮಲ್ ಚಿತ್ರವನ್ನೂ ಗಡಿ ಭದ್ರತಾ ಪಡೆ ಬಿಡುಗಡೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News