×
Ad

ಜಾರ್ಖಂಡ್:‌ 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ

Update: 2023-08-19 20:16 IST

ಸಾಂದರ್ಭಿಕ ಚಿತ್ರ.| Photo: PTI

ರಾಂಚಿ: ಜಾರ್ಖಂಡ್‌ ರಾಜ್ಯದ 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ. ಇಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ ಎಂದು ಹಿರಿಯ ವೈದ್ಯರು ದೃಢಪಡಿಸಿದ್ದಾರೆ.

ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಮಗುವನ್ನು ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯ ಲಕ್ಷಣ ಕಾಣಿಸಿದ್ದರಿಂದ ರಿಮ್ಸ್‌ಗೆ ದಾಖಲಿಸಲಾಗಿತ್ತು.

ಮಗುವಿನ ಮೂಗಿನ ದ್ರವವನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ಹಕ್ಕಿಜ್ವರ ದೃಢಪಟ್ಟಿದೆ ಎಂದು ಮಕ್ಕಳ ವಿಭಾಗದ ಡಾ.ರಾಜೀವ್ ಮಿಶ್ರಾ ತಿಳಿಸಿದ್ದಾರೆ. ಇದು ಈ ಬಾರಿಯ ಮೊದಲ ಹಕ್ಕಿ ಜ್ವರದ ಪ್ರಕರಣ, ಮಗುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News