ಭಾಷೆ ಬಗ್ಗೆ ಮಾತನಾಡಲು ರಾಜಕಾರಣಿಗಳು ಅರ್ಹರಲ್ಲ: ಕಮಲ್ ಹಾಸನ್
Update: 2025-05-28 22:15 IST
ಕಮಲ್ ಹಾಸನ್ | PC : PTI
ಚೆನ್ನೈ: ತಮಿಳಿನಿಂದ ಕನ್ನಡ ಹುಟ್ಟಿತು ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಒಳಗಾಗಿರುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ತಾನು ಕನ್ನಡದ ಕುರಿತು ಪ್ರೀತಿಯಿಂದ ಹೇಳಿಕೆ ನೀಡಿದ್ದೇನೆಯೇ ಹೊರತು ಅಗೌರವದಿಂದ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಕನ್ನಡದ ಕುರಿತು ನೀಡಿದ ಹೇಳಿಕೆ ಪ್ರೀತಿಯಿಂದ ನೀಡಿದ್ದಾಗಿದೆ. ನನಗೆ ಅನೇಕ ಇತಿಹಾಸಕಾರರು ಭಾಷೆಯ ಚರಿತ್ರೆಯನ್ನು ಕಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ನಾನು ಸೇರಿದಂತೆ ರಾಜಕಾರಣಿಗಳು ಭಾಷೆಯ ಕುರಿತು ಮಾತನಾಡಲು ಅರ್ಹರಲ್ಲ. ರಾಜಕಾರಣಿಗಳಿಗೆ ಅಷ್ಟು ವಿದ್ಯಾಭ್ಯಾಸ ಇಲ್ಲ. ಈ ಕುರಿತ ಚರ್ಚೆಯನ್ನು ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಹಾಗೂ ಭಾಷಾ ತಜ್ಞರಿಗೆ ಬಿಡೋಣ ಎಂದು ಕಮಲ್ ಹಾಸನ್ ಹೇಳಿದ್ದಾರೆ.