×
Ad

ಸಂಘ ಪರಿವಾರ ಈಗಲೂ ಮಹಾತ್ಮ ಗಾಂಧಿಗೆ ಹೆದರುತ್ತದೆ: ಕೇರಳ ಸಿಎಂ ಪಿಣರಾಯಿ ವಿಜಯನ್

Update: 2026-01-30 17:50 IST

ಸಿಎಂ ಪಿಣರಾಯಿ ವಿಜಯನ್ | Photo Credit : PTI 

ತಿರುವನಂತಪುರಂ: ಮಹಾತ್ಮ ಗಾಂಧಿಯವರ 78ನೇ ಪುಣ್ಯ ತಿಥಿಯಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, "ಸಂಘ ಪರಿವಾರ ಈಗಲೂ ಮಹಾತ್ಮ ಗಾಂಧಿಗೆ ಹೆದರುತ್ತದೆ" ಎಂದು ವ್ಯಂಗ್ಯವಾಡಿದರು.

"ಸಂಘ ಪರಿವಾರ ಈಗಲೂ‌ ಮಹಾತ್ಮ ಗಾಂಧಿಗೆ ಹೆದರುತ್ತದೆ. ಹೀಗಾಗಿಯೇ ಅವರ ಹೆಸರನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ತೆಗೆದು ಹಾಕಲಾಗಿದೆ" ಎಂದು ಟೀಕಿಸಿದ್ದಾರೆ.

ಮಹಾತ್ಮ ಗಾಂಧಿಯವರ ಜಾತ್ಯತೀತತೆ ಪರವಾದ ರಾಜೀರಹಿತ ಬದ್ಧತೆ ಹಾಗೂ ವೈವಿಧ್ಯಮಯ ಮತ್ತು ಭಿನ್ನಮತದ ಬಹುತ್ವ ದೇಶವನ್ನು ಒಪ್ಪಿಕೊಂಡಿದ್ದರಿಂದ ಅವರನ್ನು ಹತ್ಯೆಗೈಯ್ಯಲಾಯಿತು ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಅವರೀಗಲೂ ಗಾಂಧೀಜಿಗೆ ಏಕೆ ಹೆದರುತ್ತಾರೆ? ಉತ್ತರ ಸರಳ. ಸಂಘ ಪರಿವಾರದ ದ್ವೇಷ ಮತ್ತು ಪ್ರತ್ಯೇಕತಾವಾದ ದೃಷ್ಟಿಕೋನಕ್ಕೆ ಗಾಂಧೀಜಿಯವರ ದೃಷ್ಟಿಕೋನ ಸಂಪೂರ್ಣ ವಿರುದ್ಧವಾಗಿತ್ತು" ಎಂದು ಅವರು ಬರೆದುಕೊಂಡಿದ್ದಾರೆ.

ಗಾಂಧೀಜಿಯನ್ನು ಜನರ ಬದುಕಿನಿಂದ ತೆಗೆದು ಹಾಕಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.

ವೈವಿಧ್ಯತೆ ಭಾರತೀಯ ಗಣರಾಜ್ಯದ ಬುನಾದಿಯಾಗಿದೆ ಎಂದು ಹೇಳಿರುವ ವಿಜಯನ್, "ಅದನ್ನು ಎಲ್ಲರೂ ಭಿನ್ನಮತವನ್ನು ಹತ್ತಿಕ್ಕುವ ಬಹುಸಂಖ್ಯಾತವಾದದಿಂದ ರಕ್ಷಿಸಬೇಕಿದೆ" ಎಂದು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News