×
Ad

ಕೇರಳ| ಸಿಪಿಎಂ ಮಾಜಿ ಶಾಸಕ ಎಸ್‌.ರಾಜೇಂದ್ರನ್ ಬಿಜೆಪಿಗೆ ಸೇರ್ಪಡೆ

Update: 2026-01-18 20:19 IST

Photo: newindianexpress

ತಿರುವನಂತಪುರಂ: ಮಾಜಿ ಶಾಸಕ ಹಾಗೂ ಇಡುಕ್ಕಿ ಜಿಲ್ಲೆಯ ಸಿಪಿಎಂ ನಾಯಕ ಎಸ್‌.ರಾಜೇಂದ್ರನ್ ರವಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ತಿರುವನಂತಪುರಂನಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಎಸ್‌.ರಾಜೇಂದ್ರನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಸೇರುವ ಕುರಿತು ಈ ಮೊದಲು ಸಾರ್ವಜನಿಕವಾಗಿಯೇ ಬಯಕೆ ವ್ಯಕ್ತಪಡಿಸಿದ್ದ ಎಸ್‌.ರಾಜೇಂದ್ರನ್, ಕೆಲ ದಿನಗಳ ಹಿಂದೆ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿದ್ದರು.

ಎಸ್.ರಾಜೇಂದ್ರನ್ ಶೀಘ್ರದಲ್ಲೇ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿದೆ. ತಾನೇಕೆ ಸಿಪಿಎಂ ತೊರೆಯುವ ನಿರ್ಧಾರವನ್ನು ಕೈಗೊಂಡೆ, ಭವಿಷ್ಯದ ರಾಜಕಾರಣದಲ್ಲಿ ತನ್ನ ಪಾತ್ರವೇನು ಎಂದು ವಿವರಿಸಲಿದ್ದಾರೆ ಎಂದು ಹೇಳಲಾಗಿದೆ.

ಸಿಪಿಎಂನಿಂದ ಮೂರು ಬಾರಿ ಶಾಸಕರಾಗಿದ್ದ ಎಸ್‌.ರಾಜೇಂದ್ರನ್ ಬಿಜೆಪಿ ಸೇರುವ ಕುರಿತು ಈ ಮೊದಲು ಸಾರ್ವಜನಿಕವಾಗಿಯೇ ಬಯಕೆ ವ್ಯಕ್ತಪಡಿಸಿದ್ದರು , ಕೆಲ ದಿನಗಳ ಹಿಂದೆ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News