×
Ad

ಓಣಂ ಆಚರಣೆ ವೇಳೆ ಜೀಪ್ ಬಾನೆಟ್ ಮೇಲೆ ಮಗುವನ್ನು ಕೂರಿಸಿ ಚಾಲನೆ: ಆರೋಪಿಯ ಬಂಧನ

Update: 2023-08-30 17:46 IST
Photo credit: keralakaumudi.com

ತಿರುವನಂತಪುರಂ: ಓಣಂ ಆಚರಿಸುವ ವೇಳೆ ತೆರೆದ ಜೀಪ್ ನ ಬಾನೆಟ್ ಮೇಲೆ ಮಗುವನ್ನು ಕೂರಿಸಿ ಚಲಾಯಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಕೇರಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಮೆನಮ್ಕುಲಂ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಆ ವ್ಯಕ್ತಿ ತನ್ನ ಸ್ನೇಹಿತನ ಮಗನಾದ ಆರು ವರ್ಷದ ಬಾಲಕನನ್ನು ಬಾನೆಟ್ ಮೇಲೆ ಕೂರಿಸಿ ವಾಹನವನ್ನು ಓಡಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ದಾರಿಹೋಕರು ತಮ್ಮ ಮೊಬೈಲ್‌ನಲ್ಲಿ ಈ ಅಪಾಯಕಾರಿ ಸಾಹಸದ ವೀಡಿಯೊವನ್ನು ಚಿತ್ರೀಕರಿಸಿದ್ದು, ಬಳಿಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಘಟನೆ ನಡೆದಾಗ ಬಾಲಕನ ತಂದೆ ಮತ್ತು ಆತನ ಇತರ ಕೆಲವು ಸ್ನೇಹಿತರು ಕೂಡ ಅದೇ ವಾಹನದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಐಪಿಸಿ 279 (ಅತಿ ವೇಗದ ಚಾಲನೆ) ಮತ್ತು ಮೋಟಾರು ವಾಹನ ಕಾಯಿದೆ 184 (ಅಪಾಯಕಾರಿ ಚಾಲನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News