×
Ad

ಕೇರಳ | ದಡ ಸೇರಿದ ಲೈಬೀರಿಯ ಸರಕು ಹಡಗಿನ ಕಂಟೈನರ್‌ಗಳು: ಸ್ಪರ್ಶಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ

Update: 2025-05-26 14:14 IST

Photo credit: PTI

ತಿರುವನಂತಪುರ : ಕೇರಳ ಕರಾವಳಿಯಲ್ಲಿ ರವಿವಾರ ಮುಳುಗಿದ ಲೈಬೀರಿಯ ಸರಕು ಹಡಗಿನ ಕಂಟೈನರ್‌ಗಳು ಸೋಮವಾರ ಬೆಳಿಗ್ಗೆ ಕೊಲ್ಲಂ ಕರಾವಳಿಯ ವಿವಿಧ ಭಾಗಗಳಲ್ಲಿ ದಡಕ್ಕೆ ಬಂದು ಸೇರಿದೆ.

ಘಟನೆ ಬಳಿಕ ಸಂಭಾವ್ಯ ತೈಲ ಸೋರಿಕೆ ಅಥವಾ ರಾಸಾಯನಿಕ ಸೋರಿಕೆ ಭೀತಿಯ ಹಿನ್ನೆಲೆ ರಾಜ್ಯವು ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು.

ಈವರೆಗೆ ಕೊಲ್ಲಂ ಕರಾವಳಿಯಲ್ಲಿ ಎಂಟು ಕಂಟೇನರ್‌ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಮೊದಲ ಕಂಟೇನರ್ ಮಧ್ಯರಾತ್ರಿಯ ಸುಮಾರಿಗೆ ಕರುಣಗಪ್ಪಳ್ಳಿಯ ಚೆರಿಯಾಝಿಕಲ್‌ನಲ್ಲಿ ಪತ್ತೆಯಾಗಿದೆ. ಬಳಿಕ ಚವರದ ಪರಿಮಳಂ ಬೀಚ್, ಶಕ್ತಿಕುಲಂಗರ ಮತ್ತು ಮಾದಮ್ಮ ಥಾಪ್, ನೀಂದಕರ ಅಲ್ತರಮೂಡು ಪ್ರದೇಶದಲ್ಲಿಯೂ ಕಂಟೇನರ್‌ಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ಎನ್. ದೇವಿದಾಸ್ ನೇತೃತ್ವದ ತಜ್ಞರ ತಂಡ ಕಂಟೈನರ್‌ಗಳನ್ನು ಪರಿಶೀಲಿಸಿದೆ. ಇಲ್ಲಿಯವರೆಗೆ ವಶಪಡಿಸಿಕೊಂಡ ಎಲ್ಲಾ ಕಂಟೈನರ್‌ಗಳು ಖಾಲಿಯಾಗಿ ಕಂಡುಬಂದಿವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ನೌಕಾಪಡೆ ಕಟ್ಟೆಚ್ಚರ ವಿಧಿಸಿದೆ. ಸಾರ್ವಜನಿಕರು ಕರಾವಳಿ ಪ್ರದೇಶದಿಂದ ದೂರ ವಿರುವಂತೆ ಸೂಚಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ಈ ಕುರಿತು ಪ್ರತಿಕ್ರಿಯಿಸಿ, ಸಾರ್ವಜನಿಕರು ಯಾವುದೇ ಕಂಟೈನರ್‌ಗಳು ಅಥವಾ ತೇಲುವ ವಸ್ತುಗಳನ್ನು ಸಮೀಪಿಸಬಾರದು ಅಥವಾ ಮುಟ್ಟಬಾರದು ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದೆ. ಯಾವುದೇ ಕಂಟೈನರ್‌ಗಳು ಕಂಡುಬಂದರೆ ತುರ್ತು ಸಂಖ್ಯೆ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News