×
Ad

ಕೇರಳ: ಪಟಾಕಿ ಸ್ಪೋಟದಲ್ಲಿ ಓರ್ವ ಸಾವು, 16 ಮಂದಿಗೆ ಗಾಯ

Update: 2024-02-12 21:48 IST

Photo: newindianexpress.com

ಕೊಚ್ಚಿ: ಕೊಚ್ಚಿಯ ತ್ರಿಪ್ಪುಣಿತುರಾದ ಪುದಿಯಕಾವುನಲ್ಲಿರುವ ಕಟ್ಟಡವೊಂದರಲ್ಲಿ ದಾಸ್ತಾನು ಇರಿಸಲಾಗಿದ್ದ ಪಟಾಕಿ ಸೋಮವಾರ ಬೆಳಗ್ಗೆ ಸ್ಫೋಟಗೊಂಡ ಪರಿಣಾಮ ಕನಿಷ್ಠ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಹಾಗೂ ಇತರ 16 ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಉಲ್ಲೂರು ನಿವಾಸಿ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ನಾಲ್ವರನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರನ್ನು ಎರ್ನಾಕುಳಂ ಜನರಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದರು. ಮೂವರನ್ನು ಕಲಮಶ್ಶೇರಿ ವೈದ್ಯಕೀಯ ಕಾಲೇಜು ಹಾಗೂ ಇನ್ನು ಮೂರು ಮಂದಿಯನ್ನು ತ್ರಿಪ್ಪುಣಿತುರಾ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಭಾರೀ ಸ್ಫೋಟದಿಂದ ಸುತ್ತಮುತ್ತಲಿನ 25 ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಇದರ ಪರಿಣಾಮ ಅನುಭವಕ್ಕೆ ಬಂದಿದೆ. ಕಟ್ಟಡದ ಸಮೀಪ ನಿಲ್ಲಿಸಲಾಗಿದ್ದ ಕಾರು ಸುಟ್ಟು ಕರಕಲಾಗಿದೆ.

ಪಟಾಕಿಗಳ ಪೆಟ್ಟಿಗೆಗಳನ್ನು ಅನ್ಲೋಡ್ ಮಾಡುವ ಸಂದರ್ಭ ಸ್ಫೋಟ ಸಂಭವಿಸಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News