×
Ad

ಕೆನಡಾದ ಅರ್ಷ ದಲಾ ಗ್ಯಾಂಗಿನ ಇಬ್ಬರ ಸೆರೆ

Update: 2023-10-12 20:33 IST

ಹೊಸದಿಲ್ಲಿ: ದಿಲ್ಲಿಯಲ್ಲಿ ಬುಧವಾರ ತಡರಾತ್ರಿ ಎನ್‌ಕೌಂಟರ್ ಸಂದರ್ಭದಲ್ಲಿ ದಿಲ್ಲಿ ಪೊಲೀಸರ ತಂಡದ ಮೇಲೆ ಗ್ರೆನೇಡ್ ಎಸೆಯಲು ಪ್ರಯತ್ನಿಸಿದ್ದ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಅರ್ಷ ದಲಾನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ದಿಲ್ಲಿ ಪೊಲೀಸ್‌ನ ವಿಶೇಷ ಘಟಕದ ತಂಡವು ಬುಧವಾರ ತಡರಾತ್ರಿ ಹೊರ ವರ್ತುಲ ರಸ್ತೆಯಲ್ಲಿ ದಲಾ ಗ್ಯಾಂಗಿನ ಇಬ್ಬರು ಶೂಟರ್‌ಗಳನ್ನು ತಡೆದಿತ್ತು. ಶರಣಾಗುವಂತೆ ಅವರಿಗೆ ಸೂಚಿಸಲಾಗಿತ್ತು. ಆದರೆ ಅವರ ಪೈಕಿ ಕೃಷ್ಣ ಎಂಬಾತ ಪಿಸ್ತೂಲನ್ನು ಹೊರತೆಗೆದು ಪೊಲೀಸರ ತಂಡದತ್ತ ಒಂದು ಸುತ್ತು ಗುಂಡು ಹಾರಿಸಿದ್ದ. ಇನ್ನೋರ್ವ ಗ್ಯಾಂಗ್‌ಸ್ಟರ್ ಏಕಾಏಕಿ ಸಜೀವ ಗ್ರೆನೇಡ್‌ನ್ನು ತನ್ನ ಬ್ಯಾಗಿನಿಂದ ಹೊರತೆಗೆದಿದ್ದ. ಆತ ಅದರ ಸೇಫ್ಟಿ ಪಿನ್ ಎಳೆಯುವ ಮೊದಲೇ ಪೊಲೀಸರು ಆತನ ಮೇಲೆ ಮುಗಿಬಿದ್ದು ಗ್ರೆನೇಡ್ ಎಸೆಯುವ ಯತ್ನವನ್ನು ವಿಫಲಗೊಳಿಸಿದ್ದರು. ಇಬ್ಬರೂ ಗ್ಯಾಂಗ್‌ಸ್ಟರ್‌ಗಳನ್ನು ಬಂಧಿಸಲಾಗಿದ್ದು, ಒಂದು ಸಜೀವ ಗ್ರೆನೇಡ್, ಒಂದು ಪಿಸ್ತೂಲು ಮತ್ತು ಐದು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News